ತಂತ್ರಜ್ಞಾನ

ಬಿಟ್ ಕಾಯಿನ್ ವಿರುದ್ಧ ಭಾರತೀಯ ಡಿಜಿಟಲ್ ಕರೆನ್ಸಿ ಲಕ್ಷ್ಮೀ ಕಾಯಿನ್

ಮುಂಬೈ: ವಿಶ್ವದಾದ್ಯಂತ ಬಿಟ್ ಕೊಯಿನ್ ವ್ಯಾಪಕವಾಗಿ ಚಲಾವಣೆಯಾಗುತ್ತಿರುವ ಬೆನ್ನಲ್ಲೇ, ಇದೇ ಮಾದರಿಯಲ್ಲಿ ದೇಶದಲ್ಲಿ ಹೊಸ ಡಿಜಿಟಲ್ ಕರೆನ್ಸಿ ಬಿಡುಗಡೆ ಮಾಡಲು ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸಿದೆ ಈ ಕುರಿತು ಸರ್ಕಾರ ತಜ್ಞರ ಸಮಿತಿಯೊಂದನ್ನು ನೇಮಕ ಮಾಡಿದ್ದು, ಯೋಜನೆಯ ಸಾಧಕ-ಬಾಧಕಗಳ ಕುರಿತು ಪರಾಮರ್ಶೆ ನಡೆಸಿ ಇದು ವರದಿ ನೀಡಲಿದೆ.

ಹೊಸ ಡಿಜಿಟಲ್ ಕರೆನ್ಸಿಗೆ ಲಕ್ಷ್ಮೀ ಎಂದು ಹೆಸರಿಡಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ರಿಜರ್ವ್ ಬ್ಯಾಂಕ್ ನ ಎಕ್ಸಿಕ್ಯೂಟಿವ್ ಚೇರ್ಮನ್ ಸುದರ್ಶನ್ ಸೆನ್ ಕೂಡಾ ಈ ಕುರಿತು ಸುಳಿವು ನೀಡಿದ್ದಾರೆ.

ದೇಶದಲ್ಲಿ ಬಿಟ್ ಕೊಯಿನ್ ವಹಿವಾಟಿನಿಂದ ಹಲವು ಅನಾನುಕೂಲತೆಗಳಿವೆ. ಹೀಗಾಗಿ ಭಾರತದಲ್ಲಿ ಪ್ರತ್ಯೇಕ ಡಿಜಿಟಲ್ ಕರೆನ್ಸಿ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ಹೊಸ ಡಿಜಿಟಲ್ ಕರೆನ್ಸಿ ಜಾರಿಗೊಳಿಸಬೇಕಿದ್ದರೆ ಕರೆನ್ಸಿ ಕಾಯಿದೆಗೆ ತಿದ್ದುಪಡಿ ತರಬೇಕಾಗುತ್ತದೆ. ಪ್ರಸ್ತುತ ಬಿಟ್ ಕಾಯಿನ್ ವಹಿವಾಟಿಗೆ ಯಾವುದೇ ನಿಯಂತ್ರಣವಿಲ್ಲ.

ಹೀಗಾಗಿ ಹಲವು ಅಕ್ರಮಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತವೆ. ಕೇಂದ್ರ ಸರ್ಕಾರವೇ ಹೊಸ ಡಿಜಿಟಲ್ ಕರೆನ್ಸಿ ಜಾರಿಗೊಳಿಸಿದರೆ ಸಂಪೂರ್ಣ ಪಾರದರ್ಶಕ ಹಾಗೂ ನಿಯಂತ್ರಣ ಸಾಧ್ಯವಾಗುತ್ತದೆ.

About the author

ಕನ್ನಡ ಟುಡೆ

Leave a Comment