ರಾಜಕೀಯ

ಬಿಬಿಎಂಪಿ, ಕಾಂಗ್ರೆಸ್​ನ ಗಂಗಾಂಬಿಕೆ ಮಲ್ಲಿಕಾರ್ಜುನ್ 52ನೇ ಮೇಯರ್ ಆಗಿ ಆಯ್ಕೆ

ಬೆಂಗಳೂರು: ಬಿಬಿಎಂಪಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್​ ಹಾಗೂ ಉಪ ಮೇಯರ್​ ಸ್ಥಾನಕ್ಕೆ ಆಯ್ಕೆ ಚುನಾವಣೆ ಇಂದು ನಡೆದಿದೆ. ಕಾಂಗ್ರೆಸ್​ನ ಗಂಗಾಂಬಿಕೆ ಮಲ್ಲಿಕಾರ್ಜುನ್​ 52ನೇ ಮೇಯರ್ ಆಗಿ ಆಯ್ಕೆಯಾಗಿದ್ದಾರೆ ಹಾಗೂ ಜೆಡಿಎಸ್​ನ ರಮಿಳಾ ಉಮಾಶಂಕರ್​ ಉಪ ಮೇಯರ್​ ಆಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಡಸ್​ ಹಾಗೂ-ಜೆಡಿಎಸ್ ಮೈತ್ರಿಕೂಟಕ್ಕೆ ಗೆಲುವು ಲಭಿಸಿದೆ. ಜಯನಗರ ವಾರ್ಡ್‌ನ ಕಾಂಗ್ರೆಸ್‌ ಸದಸ್ಯೆ  ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರು ಬೆಂಗಳೂರು ನಗರದ ಪ್ರಥಮ ಪ್ರಜೆಯಾಗಿ ಆಯ್ಕೆಯಾಗಿದ್ದಾರೆ. 45 ವರ್ಷಗಳ‌ ನಂತರ ಲಿಂಗಾಯತ ಸಮುದಾಯದ ಅಭ್ಯರ್ಥಿ ಬಿಬಿಎಂಪಿ ಗದ್ದುಗೆಯೇರಿದ್ದಾರೆ.

ಪ್ರಾದೇಶಿಕ ಆಯುಕ್ತ ಶಿವಯೋಗಿ ಕಳಸದ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಮೇಯರ್ ಪಟ್ಟಕ್ಕೆ ಬಿಜೆಪಿಯಿಂದ ಶೋಭಾ ಅಂಜನಪ್ಪ ಹಾಗೂ ಉಪ ಮೇಯರ್ ಪಟ್ಟಕ್ಕೆ ಪ್ರತಿಭಾ ಧನರಾಜ್ ನಾಮಪತ್ರ ಸಲ್ಲಿಸಿದ್ದರು. ಇತ್ತ ಕಾಂಗ್ರೆಸ್‌ನಿಂದ ಗಂಗಾಂಬಿಕೆ ಮೇಯರ್ ಪಟ್ಟಕ್ಕೆ ಹಾಗೂ ಉಪ ಮೇಯರ್ ಪಟ್ಟಕ್ಕೆ ಜೆಡಿಎಸ್​ನ ರಮೀಳಾ ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣೆಗೂ ಮೊದಲು ನಡೆದ ಬಿಜೆಪಿ ಹಾಗೂ ಕಾಂಗ್ರೆಸ್​ ನಾಯಕರು ಕಿತ್ತಾಡಿಕೊಂಡು ಬಿಬಿಎಂಪಿಯಲ್ಲಿ ಹೈಡ್ರಾಮಾವೇ ನಡೆದಿತ್ತು. ಇದಾದ ಬಳಿಕ ಅಸಮಾಧಾನಗೊಂಡ ಬಿಜೆಪಿ ನಾಯಕರು ಚುನಾವಣೆ ಬಹಿಷ್ಕರಿಸಿ ಸಭಾತ್ಯಾಗ ಮಾಡಿದ್ದರು.

ಬಿಜೆಪಿ ಹಾಗೂ ಕಾಂಗ್ರೆಸ್​ ಸದಸ್ಯರು ಪ್ರತಿಷ್ಟೆಯಾಗಿ ಸ್ವೀಕರಿಸಿದ್ದ ಈ ಚುನಾವಣೆಯಲ್ಲಿ ಗಂಗಾಂಬಿಕೆ 130 ಮತಗಳನ್ನು ಪಡೆದು ಬೆಂಗಳೂರಿನ 52ನೇ ಮೇಯರ್ ಆಗಿ ಆಯ್ಕೆಯಾದರೆ, . ಜೆಡಿಎಸ್​ನ ರಮೀಳಾರವರು 129 ಮತಗಳನ್ನು ಪಡೆದು ಉಪಮೇಯರ್​ ಆಗಿ ಆಯ್ಕೆಯಾಗಿದ್ದಾರೆ. ಬಹುಮತದೊಂದಿಗೆ ಆಯ್ಕೆಯಾದ ಗಂಗಾಂಬಿಕೆ ಹಾಗೂ ರಮೀಳಾರವರಿಗೆ ಮಾಜಿ ಮೇಯರ್​ ಸಂಪತ್​ರಾಜ್​ ಅಭಿನಂದಿಸಿ, ಅಧಿಕಾರ ಹಸ್ತಾಂತರಿಸಿದ್ದಾರೆ. ಬಿಬಿಎಂಪಿ ಮೇಯರ್​ ಹಾಗೂ ಉಪಮೇಯರ್​ ಆಯ್ಕೆ ಚುನಾವಣೆಯ ಕ್ಷಣ ಕ್ಷಣದ ಇಲ್ಲಿದೆ.

 

About the author

ಕನ್ನಡ ಟುಡೆ

Leave a Comment