ರಾಷ್ಟ್ರ ಸುದ್ದಿ

ಬಿಹಾರ ಮಾಜಿ ಸಿಎಂ ಆರೋಗ್ಯ ಸ್ಥಿತಿಯಲ್ಲಿ ಏರುಪೇರು

ರಾಂಚಿ: ಆರ್ ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರ ಬಲಗಾಲಿನಲ್ಲಿ ಗುಳ್ಳೆಗಳು ಕಾಣಿಸಿಕೊಂಡಿದ್ದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಸದ್ಯ ಲಾಲೂ ಪ್ರಸಾದ್ ಯಾದವ್ ಮೇವು ಹಗರಣ ಸಂಬಂಧ ಜೈಲುಶಿಕ್ಷೆ ಅನುಭವಿಸುತ್ತಿದ್ದಾರೆ. ಲಾಲೂ ಪ್ರಸಾದ್ ಇದೀಗ ರಾಂಚಿಯ ರಾಜೇಂದ್ರ ಇನ್ ಸ್ಟಿಟ್ಯೂಟ್ಆಫ್ ಮೆಡಿಕಲ್ ಸೈನ್ಸಸ್ (ಆರ್ಐಎಂಎಸ್) ನ ವಿಒಶೇಷ ಸೌಲಭ್ಯಗಳುಳ್ಳ ವಾರ್ಡ್ ನಲ್ಲಿ ಚಿಕಿತ್ಸೆ ಹೊಂದುತ್ತಿದ್ದಾರೆ.
ಗುಳ್ಳೆಗಳೆದ್ದ ಕಾರಣ ಕಳೆದ ಎರಡದಿಂದ ಮುರು ದಿನಗಳಲ್ಲಿಲಾಲೂ ಅವರ ದೇಹದ ಸಕ್ಕರೆ ಪ್ರಮಾಣ ಹಾಗೂ ರಕ್ತದೊತ್ತಡ ಅಧಿಕವಾಗಿದೆ. ಈ ಗುಳ್ಳೆಗಳು ಕಡಿಮೆಯಾಗಲು ಇನ್ನಷ್ಟು ಸಮಯಾವಕಾಶ ಹಿಡಿಯಲಿದೆ ಎಂದು ಆರ್ಐಎಂಎಸ್ ವೈದ್ಯರಾದ ಉಮೇಶ್ ಪ್ರಸಾದ್ ಹೇಳಿದ್ದಾರೆ. ಲಾಲೂ ಅವರ ದೇಹದಲ್ಲಿ ಸಕ್ಕರೆ ಅಂಶ ಅಧಿಕವಾಗಿರುವ ಕಾರಣ ವರಿಗೆ ನೀಡಲಾಗುವ ಇನ್ಸುಲಿನ್ ಪ್ರಮಾಣವನ್ನು ಸಹ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವೀಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ: ಐಆರ್ ಸಿಟಿಸಿ ಭ್ರಷ್ಠಾಚಾರ ಪ್ರೆಅಕರಣದಲ್ಲಿ ಲಾಲೂ ಅವರ ವಿಚಾರಣೆ ಡಿಸೆಂಬರ್ 20ರಂದು ನಡೆಯಲಿದೆ, ಈ ವಿಚಾರಣೆಗಾಗಿ ಲಾಲೂ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಝರಾಗಲಿದ್ದಾರೆ. ಲಾಲೂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಮುಖತಃ ವಿಚಾರಣೆಗಾಗಿ ಹಾಜರಾಗಲು ಸಾಧ್ಯವಿಲ್ಲ ಎಂದು ಬಿಹಾರ ಮಾಜಿ ಸಿಎಂ ಪರ ವಕೀಲರು ವಾದಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಸೂಚನೆ ನೀಡಿದೆ.

About the author

ಕನ್ನಡ ಟುಡೆ

Leave a Comment