ರಾಜ್ಯ ಸುದ್ದಿ

ಯಡಿಯೂರಪ್ಪ ಕುಟುಂಬಸ್ಥರಿಂದ ಶಿಕಾರಿಪುರದಲ್ಲಿ ಮತದಾನ

ಶಿವಮೊಗ್ಗ: ಪೈಪೋಟಿ, ಪ್ರತಿಷ್ಠೆ ಕಣವಾಗಿ ಪರಿಣಮಿಸಿರುವ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತದಾನ ಆರಂಭವಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರು ಮತದಾನ ಪ್ರಕ್ರಿಯೆ ಆರಂಭದಲ್ಲೇ ಮತ ಚಲಾಯಿಸಿದರು. ಶಿಕಾರಿಪುರ ತಾಲೂಕು ಕಚೇರಿ ಆವರಣದಲ್ಲಿರುವ ಮತಗಟ್ಟೆಗೆ ಕುಟುಂಬ ಸಮೇತರಾಗಿ ಆಗಮಿಸಿದ ಬಿಎಸ್‌ವೈ ಮತ ಚಲಾವಣೆ ಮಾಡಿದರು.

ಇದಕ್ಕೂ ಮುನ್ನ ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಿಎಸ್‌ವೈ ಪುತ್ರ ಮತ್ತು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಹಾಗೂ ಬಿ.ವೈ.ವಿಜಯೇಂದ್ರ ಸೇರಿ ಕುಟುಂಬಸ್ಥರು ಇದ್ದರು. ಬಳಿಕ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಕುಟುಂಬದವರೊಂದಿಗೆ ಕಾಲ್ನಡಿಗೆಯಲ್ಲಿ ತೆರಳಿ ಮಠದಲ್ಲಿ ಪೂಜೆ ಸಲ್ಲಿಸಿದ ಬಳಿಕ ತಾಲೂಕು ಕಚೇರಿ ಆವರಣದ ಮತಗಟ್ಟೆಗೆ ಆಗಮಿಸಿದರು.

About the author

ಕನ್ನಡ ಟುಡೆ

Leave a Comment