ರಾಜಕೀಯ

ಬಿ.ಎಸ್.ವೈ ಸಮ್ಮುಖದಲ್ಲಿ ಕಾಂಗ್ರೇಸ್ ನಾಯಕರು ಬಿಜೇಪಿ ಸೇರ್ಪಡೆ

ಬೆಂಗಳೂರು:ಬಿಜೆಪಿಗೆ ಪಕ್ಷ ಸೇರ್ಪಡೆಯಾಗುತ್ತಿರುವ ನಾಯಕರ ಸಂಖ್ಯೆ ಹೆಚ್ಚುತ್ತಲಿದೆ. ಪಕ್ಷದ ಸಿದ್ಧಾಂತಗಳು ಹಾಗು ಸಮರ್ಥ ನಾಯಕತ್ವದ ಹಿನ್ನೆಲೆಯಲ್ಲಿ ಅನ್ಯ ಪಕ್ಷಗಳ ವರ್ಚಸ್ವೀ ನಾಯಕರನ್ನು ಬಿಜೆಪಿಯತ್ತ ಆಕರ್ಷಿಸುವಲ್ಲಿ ಸಫಲವಾಗಿದೆ.

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಇಂದು ಬಸವ ಕಲ್ಯಾಣದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಬಸವರಾಜ ಪಾಟೀಲ್ ಅನ್ವರಿ ಹಾಗು ಮಾಜಿ ಶಾಸಕ ನಾಗಪ್ಪ ಸಾಲೋನಿ ಯವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡರು.

ಪಕ್ಷದ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಸಮಾರಂಭದಲ್ಲಿ ಈ ಮುಖಂಡರುಗಳನ್ನು ಅವರ ಅನೇಕ ಬೆಂಬಲಿಗರೊಂದಿಗೆ ಪಕ್ಷದ ಧ್ವಜ ನೀಡುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಾಯಿತು.

ಮುಖಂಡರುಗಳಾದ ಶ್ರೀ ಸಂಗಣ್ಣ ಕರಡಿ, ಶ್ರೀ ವಿ.ಸೋಮಣ್ಣ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About the author

ಕನ್ನಡ ಟುಡೆ

Leave a Comment