ರಾಷ್ಟ್ರ ಸುದ್ದಿ

ಬುದ್ಗಾಮ್ ನಲ್ಲಿ ಭಾರತೀಯ ವಾಯುಪಡೆಯ ಮಿಗ್ 21 ಪತನ: ಇಬ್ಬರು ಪೈಲಟ್ ಸಾವು

ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಬುದ್ಗಾಮ್ ನಲ್ಲಿ ವಾಯುಸೇನೆಯ ವಿಮಾನ ಪತನಗೊಂಡು ಇಬ್ಬರು ಪೈಲಟ್ ಹುತಾತ್ಮರಾಗಿದ್ದಾರೆ. ಬುಧವಾರ ಬೆಳಗ್ಗೆ ಬುದ್ಗಾಮ್ ನಲ್ಲಿ ಗಸ್ತು ತಿರುಗುವ ವೇಳೆ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಆಗಮಿಸಿರುವ  ತಂತ್ರಜ್ಞರ ತಂಡ ಪರಿಶೀಲಿಸುತ್ತಿದೆ, ಇಬ್ಬರ ದೇಹಗಳು ಪತ್ತೆಯಾಗಿವೆ ಎಂದು ಬುದ್ಗಾಮ್ ಎಸ್ ಎಸ್ ಪಿ ತಿಳಿಸಿದ್ದಾರೆ. ಬದ್ಗಾಮ್ ಜಿಲ್ಲೆಯ ಗರೇಂದ್ ಕಲಾನ್ ಗ್ರಾಮದಲ್ಲಿ  ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ವಿಮಾನ ಪತನಗೊಂಡಿತ್ತು, ಕೆಳಗೆ ಬಿದ್ದ ಜೆಟ್ 2ಭಾಗವಾಯಿತು, ಕೂಡಲೇ ಬೆಂಕಿ ಹೊತ್ತಿಕೊಂಡಿತ್ತು.

About the author

ಕನ್ನಡ ಟುಡೆ

Leave a Comment