ಪರಿಸರ

ಬೆಂಗಳೂರಿನಲ್ಲಿ ಗಾಳಿ ಆರ್ಭಟ: ಹಲವೆಡೆ ಭಾರೀ ಮಳೆ, ಕೆ.ಆರ್.ಪುರಂನಲ್ಲಿ ಅತೀ ಹೆಚ್ಚು 46 ಮಿ.ಮೀ ಮಳೆ

ಬೆಂಗಳೂರು: ನಗರದ ವಿವಿಧೆಡೆ ಶುಕ್ರವಾರ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು, 13 ಮರಗಳು ಧರೆಗುರುಳಿವೆ.
ಸಂಜೆ ವೇಳೆಗೆ ನಗರದ ಹೊರವಲಯದಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಕೇಂದ್ರ ಭಾಗದ ಪ್ರದೇಶದಲ್ಲಿ ಬಿುಗಾಳಿಯ ಆರ್ಭಟ ಹೆಚ್ಚಾಗಿತ್ತು. ರಾತ್ರಿ ವೇಳೆಗೆ ಕೇಂದ್ರ ಭಾಗದಲ್ಲೂ ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿಯಿತು. ಪರಿಣಾಮ ಕೆ.ಜಿ.ರಸ್ತೆ, ರೇಸ್’ಕೋರ್ಸ್ ರಸ್ತೆ, ಶೇಷಾದ್ರಿ ರಸ್ತೆ, ನೃಪತುಂಗ ರಸ್ತೆ, ಕಬ್ಬನ್ ರಸ್ತೆಗಳಲ್ಲಿ ಮರಗಳಲ್ಲಿ ಒಣಗಿದ್ದ ಪುಡಿ ರೆಂಬೆಗಳು, ಎಲೆ ಮತ್ತು ಹೂಗಳ ತ್ಯಾಜ್ಯ ವಿವಿಧ ರಸ್ತೆಯಲ್ಲಿ ಹಾಸಿ ಬೀಳುವಂತೆ ಮಾಡಿತು.
ಭಾರೀ ಗಾಳಿಯಿಂದ ಧೂಳು ಸಹಿತವಾಗಿ ಈ ತ್ಯಾಜ್ಯ ಒಮ್ಮೆಲೆ ಮೇಳುತ್ತಿದ್ದುದ್ದರಿಂದ ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿತ್ತು. ಪೂರ್ವ ಮತ್ತು ಉತ್ತರ ವಲಯಗಳಲ್ಲಿ ಅತೀ ಹೆಚ್ಚು ಮಳೆಯಾಗಿದ್ದು, ಕೆ.ಆರ್.ಪುರಂನಲ್ಲಿ ಅತೀ ಹೆಚ್ಚು 46 ಮಿ.ಮೀನಷ್ಟು ಮಳೆಯಾಗಿದೆ. ಇದರಿಂದ ಅಲ್ಲಿನ ಅಂಡಲ್ ಪಾಲ್ ನಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಭಾರೀ ಸಮಸ್ಯೆಗಳು ಎದುರಾಗಿತ್ತು. ಅವಲಹಳ್ಳಿ ಹತ್ತಿರವಿರುವ ದೊಡ್ಡಬನಹಳ್ಳಿಯಲ್ಲಿ 21 ಎಂಎಂ ಮಳೆಯಾಗಿದ್ದರೆ, ಯಲಹಂಕದಲ್ಲಿ 16.5 ಮಿ.ಮೀ ಮಳೆಯಾಗಿದೆ.

About the author

ಕನ್ನಡ ಟುಡೆ

Leave a Comment