ತಂತ್ರಜ್ಞಾನ

ಬೆಂಗಳೂರಿನಲ್ಲಿ 5G ತಂತ್ರಜ್ಞಾನ, ದೇಶದಲ್ಲಿಯೇ ಮೊದಲು

ಬೆಂಗಳೂರು; ದೇಶದ ಅತಿದೊಡ್ಡ ಮೊಬೈಲ್‌ ಸೇವಾ ಸಂಸ್ಥೆ ಏರ್‌ಟೆಲ್‌ ‘5ಜಿ’ ಮೊಬೈಲ್‌ ತಂತ್ರಜ್ಞಾನ ಆರಂಭಿಸಲು ಮುಂದಾಗಿದೆ.!!ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ ಎಂಬ ಹೆಸರನ್ನು ಪಡೆದಿರುವ ಬೆಂಗಳೂರು ‘5ಜಿ’ ತಂತ್ರಜ್ಞಾನ ಬಳಕೆಯ ದೇಶದ ಮೊದಲ ನಗರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಮ್ಯಾಸಿವ್ ಮಲ್ಟಿಪಲ್ ಮತ್ತು ಇನ್‌ಪುಟ್‌ ಮಲ್ಟಿಪಲ್ ಔಟ್‌ಪುಟ್‌ ತಂತ್ರಜ್ಞಾನದ ನೆರವಿನಿಂದ ಏರ್‌ಟೆಲ್‌ ತನ್ನ ‘5ಜಿ’ ಸೇವೆಯನ್ನು ತರಲು ಬೆಂಗಳೂರು ಮತ್ತು ಕೋಲ್ಕತ್ತವನ್ನು ಆಯ್ದುಕೊಂಡಿದೆ.

ಬೆಂಗಳೂರಿನ ಮೊಬೈಲ್‌ ಗ್ರಾಹಕರು ‘4ಜಿ’ ವೇಗಕ್ಕಿಂತ 4 ಪಟ್ಟು ವೇಗದ ‘5ಜಿ’ ತಂತ್ರಜ್ಞಾನವನ್ನು ಬಳಸುವ ಸಾಧ್ಯತೆ ಶೀಘ್ರದಲ್ಲಿಯೇ ನಿಜವಾಗಲಿದೆ.!! ‘5ಜಿ’ ತಂತ್ರಜ್ಞಾನವು 500 MBPSಗಿಂತ ಹೆಚ್ಚಿನ ವೇಗದ ಸಾಮರ್ಥ್ಯವನ್ನೂ ಹೊಂದಿರಲಿದ್ದು, ಗರಿಷ್ಠ ಮಟ್ಟ 1 GBPS ವೇಗದವರೆಗೆ ಇರಲಿದೆ. ‘4ಜಿ’ ವೇಗವಾದ 16 MBPS ಆದರೆ, ‘5ಜಿ’ವೇಗವು 40ರಿಂದ 45 ಎಂಬಿಪಿಎಸ್‌ವರೆಗೆ ಇರಲಿದೆ. ಬೆಂಗಳೂರು ಗ್ರಾಹಕರು ಈ ಲಾಭವನ್ನು ಮೊದಲು ಪಡೆಯಲಿದ್ದಾರೆ.!!

2020ರ ವೇಳೆಗೆ ಜಗತ್ತಿನಾದ್ಯಂತ 5ಜಿ ತಂತ್ರಜ್ಞಾನ ಬಳಕೆಗೆ ಬರಲಿದ್ದು, ಭಾರತವೂ ಅದರಲ್ಲಿ ಸೇರ್ಪಡೆಗೊಳ್ಳಲಿದೆ ಎಂದು ದೂರಸಂಪರ್ಕ ಸಚಿವ ಮನೋಜ್‌ ಸಿನ್ಹಾ ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಮೊಬೈಲ್ ತರಂಗಾಂತರಗಳ ದಕ್ಷತೆಯನ್ನು ಐದರಿಂದ ಏಳುಪಟ್ಟುಗಳಷ್ಟು ವಿಸ್ತರಿಸುವ ‘ಮ್ಯಾಸಿವ್‌ ಎಂಐಎಂಒ’ ತಂತ್ರಜ್ಞಾನವನ್ನು ದೇಶದಲ್ಲಿ ಈಗಾಗಲೇ ಯಶಸ್ವಿಯಾಗಿ ಪರೀಕ್ಷಿಸಲಾಗಿದೆ.

About the author

ಕನ್ನಡ ಟುಡೆ

Leave a Comment