ರಾಜ್ಯ ಸುದ್ದಿ

ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ 6 ವಿಮಾನಗಳ ಹಾರಾಟ

ಬೆಂಗಳೂರು: ನೂತನವಾಗಿ ನಿರ್ಮಾಣಗೊಂಡಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭಗೊಂಡಿದ್ದು, ಬೆಂಗಳೂರಿನಿಂದ ಕಣ್ಣೂರಿಗೆ ವಾರಕ್ಕೆ ಒಟ್ಟು 6 ವಿಮಾನಗಳು ಹಾರಾಟ ನಡೆಸಲಿವೆ.
ಡಿ.9 ರಿಂದ ಬೆಂಗಳೂರಿನಿಂದ ಕಣ್ಣೂರಿಗೆ ವಿಮಾನಗಳು ಹಾರಾಟ ಆರಂಭಿಸಲಿದ್ದು, ವಿಮಾನದಲ್ಲಿ ಬೆಂಗಳೂರಿನಿಂದ ಕಣ್ಣೂರಿಗೆ 80 ನಿಮಿಷಗಳಲ್ಲಿ ತಲುಪಬಹುದಾಗಿದೆ. ಜಿ8 624 ವಿಮಾನವು ಕಣ್ಣೂರು ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿದ್ದು, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ 2.20ಕ್ಕೆ ಬಂದು ತಲುಪಲಿದೆ. ಜಿ8 625 ವಿಮಾನವು ಮಧ್ಯಾಹ್ನ 2.50ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿದ್ದು, 4.10ಕ್ಕೆ ಕಣ್ಣೂರು ತಲುಪಲಿದೆ.

About the author

ಕನ್ನಡ ಟುಡೆ

Leave a Comment