ರಾಷ್ಟ್ರ

ಬೆಂಗಳೂರಿನ ಸಂಸ್ಥೆಯ ಮುಡಿಗೆ ಮತ್ತೊಂದು ಗರಿ: ದೇಶದ ಸರ್ವಶ್ರೇಷ್ಠ ಸಂಸ್ಥೆ ಐಎಎಸ್‌ಸಿ

ನವದೆಹಲಿ (ಪಿಟಿಐ): ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಮುಡಿಗೆ ಹಿರಿಮೆಯ ಮತ್ತೊಂದು ಗರಿ ಸೇರ್ಪಡೆಯಾಗಿದೆ. ಐಐಎಸ್‌ಸಿ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್‌ಆರ್‌ಡಿ) ಸಚಿವಾಲಯ ಸಿದ್ಧಪಡಿಸಿದ ರ‍್ಯಾಂಕಿಂಗ್‌ ಹೇಳಿದೆ.

ಮದ್ರಾಸ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಯು (ಐಐಟಿ–ಎಂ) ದೇಶದ ಅತ್ಯುತ್ತಮ ಎಂಜಿನಿಯರಿಂಗ್‌ ಕಾಲೇಜು ಮತ್ತು ಅಹಮದಾಬಾದ್‌ನ ಭಾರತೀಯ ನಿರ್ವಹಣಾ ಸಂಸ್ಥೆಯು (ಐಐಎಂ–ಎ) ಅತ್ಯುತ್ತಮ ನಿರ್ವಹಣಾ ಸಂಸ್ಥೆ ಎಂಬ ಹೆಮ್ಮೆಗೆ ಪಾತ್ರವಾಗಿವೆ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್‌ ಜಾವಡೇಕರ್‌ ತಿಳಿಸಿದ್ದಾರೆ. ಎಚ್‌ಆರ್‌ಡಿ ಸಚಿವಾಲಯದ ರಾಷ್ಟ್ರೀಯ ರ್‍ಯಾಂಕಿಂಗ್‌ ಚೌಕಟ್ಟಿನ (ಎನ್‌ಐಆರ್‌ಎಫ್‌) ಮೂಲಕ ದೇಶದಲ್ಲಿರುವ ಶಿಕ್ಷಣ ಸಂಸ್ಥೆಗಳ ಮೌಲ್ಯಮಾಪನ ಮಾಡಿ ರ‍್ಯಾಂಕ್‌ ನೀಡಲಾಗಿದೆ.

ಅತ್ಯುತ್ತಮ ವಿಶ್ವವಿದ್ಯಾಲಯಗಳು

1. ಐಐಎಸ್‌ಸಿ, ಬೆಂಗಳೂರು

2. ಜವಾಹರಲಾಲ್‌ ನೆಹರೂ ವಿ.ವಿ. ದೆಹಲಿ

3. ಬನಾರಸ್‌ ಹಿಂದೂ ವಿಶ್ವವಿದ್ಯಾಲಯ, ವಾರಾಣಸಿ

About the author

ಕನ್ನಡ ಟುಡೆ

Leave a Comment