ರಾಜ್ಯ ಸುದ್ದಿ

ಬೆಂಗಳೂರು: ಅಕ್ರಮ ಜಾಹೀರಾತು, ರಸ್ತೆ ಗುಂಡಿಗಳ ಬಳಿಕ ಸ್ವಚ್ಛತಾ ಕಾರ್ಯದತ್ತ ಮುಖ ಮಾಡಿದ ಹೈಕೋರ್ಟ್

ಬೆಂಗಳೂರು: ಅಕ್ರಮ ಜಾಹೀರಾತು ಹಾಗೂ ರಸ್ತೆ ಗುಂಡಿ ವಿಚಾರಗಳ ಕುರಿತಂತೆ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ಹೈಕೋರ್ಟ್ ಇದೀಗ ಬೆಂಗಳೂರು ನಗರ ಸ್ವಚ್ಛತಾ ಕಾರ್ಯದತ್ತ ಮುಖಮಾಡಿದ್ದು, ಇಡೀ ಬೆಂಗಳೂರು ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಬಿಬಿಎಂಪಿಗೆ ಗುರುವಾರ ಪರೋಕ್ಷ ಸೂಚನೆ ನೀಡಿದೆ.
ದೊಮ್ಮಲೂರು 2ನೇ ಹಂತದ ಅಮ್ಮ ಭಗವಾನ್ ದೇವಸ್ಥಾನದ ಎದುರು ಕಸದ ತೊಟ್ಟಿ ನಿರ್ಮಿಸಲು ಬಿಬಿಎಂಪಿ ಮುಂದಾಗಿರುವ ಕ್ರಮ ಪ್ರಶ್ನಿಸಿ ದೇವಸ್ಥಾನದ ಭಕ್ತ ನರಸಿಂಹಮೂರ್ತಿ ಹಾಗೂ ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಹಾಗೂ ನ್ಯಾ.ಎಸ್.ಜಿ. ಪಂಡಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ದೇವಸ್ಥಾನದ ಎದುರಿನ ಕಸವನ್ನು ಸ್ವಚ್ಛಗೊಳಿಸಲಾಗುವುದು. ಕಸದ ತೊಟ್ಟಿಯನ್ನು ಬೇರೆಡೆ ಸ್ಥಳಾಂತರಿಸಲು ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ಇಡೀ ಬೆಂಗಳೂರಿನ ಸ್ವಚ್ಛತೆಯ ಕುರಿತು ವಸ್ತುನಿಷ್ಠ, ಸಮರ್ಥನೀಯ ಕ್ರಮಗಳನ್ನು ಬಿಬಿಎಂಪಿ ಕೈಗೊಳ್ಳಲಿದೆ ಎಂದು ನಿರೀಕ್ಷಿಸುತ್ತೇವೆಂದು ಹೇಳಿ. ಅಕ್ಟೋಬರ್ 31ಕ್ಕೆ ವಿಚಾರಣೆಯನ್ನು ಮುಂದೂಡಿತು.

About the author

ಕನ್ನಡ ಟುಡೆ

Leave a Comment