ರಾಜ್ಯ ಸುದ್ದಿ

ಬೆಂಗಳೂರು: ಅನುಮತಿ ಇಲ್ಲದೆ ಹೆಚ್ಎಎಲ್ ವ್ಯಾಪ್ತಿಯಲ್ಲಿ ಡ್ರೋನ್ ಬಿಟ್ಟ ಇಬ್ಬರ ಬಂಧನ

ಬೆಂಗಳೂರು: ಯಾವುದೇ ಅನುಮತಿ ಪಡೆಯದೆಯೇ, ಹೆಚ್ಎಎಲ್ ಪ್ರದೇಶದಲ್ಲಿ ಅಕ್ರಮವಾಗಿ ಡ್ರೋಣ್ ಕ್ಯಾಮೆರಾ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಹೆಚ್ಎಎಲ್ ಠಾಣೆ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ವೈಟ್ ಫೀಲ್ಡ್ ನಿವಾಸಿಗಳಾದ ಸೈಯದ್ (24) ಹಾಗೂ ಭರತ್ (28) ಬಂಧಿತ ಯುವಕರಾಗಿದ್ದು, ಯುವಕರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಎಎಲ್ ಹೆಲಿಕಾಪ್ಟರ್ ವಿಭಾಗದ ಮುಖ್ಯ ವ್ಯವಸ್ಥಾಪಕ ಕೃಷ್ಣ ನಾಯಕ್ ನೀಡಿದ ದೂರಿನ ಮೇಲೆಗೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಡಿ.15 ರಂದು ಹೆಚ್ಎಎಲ್’ನ ಹೆಲಿಕಾಪ್ಟರ್ ಡಿವಿಜನ್’ನ ಕಾರ್ಖಾನೆ ವತಿಯಿಂದ ಹರಿ ನಾಯರ್ ಎಂಬುವವರು ಮಧ್ಯಾಹ್ನ 1.30ರ ಸುಮಾರಿಗೆ ಹೆಚ್ಎಎಲ್ ಪ್ರದೇಶದಲ್ಲಿ ಹೆಲಿಕಾಪ್ಟರನ್ನು ಹಾರಾಟದ ಪರೀಕ್ಷೆ ನಡೆಸುತ್ತಿದ್ದರು. ಈ ವೇಳೆ ಅಪರಿಚಿತರು ಹೆಲಿಕಾಪ್ಟರ್’ಗೆ ತೊಂದರೆಯಾಗುವಂತೆ ಡ್ರೋನ್ ಕ್ಯಾಮೆರಾಗಳನ್ನು ಬಿಟ್ಟಿದ್ದರು.

About the author

ಕನ್ನಡ ಟುಡೆ

Leave a Comment