ರಾಜ್ಯ ಸುದ್ದಿ

ಬೆಂಗಳೂರು: ಉರಿ ಸಿನಿಮಾ ನೋಡಿದ ಕೇಂದ್ರ ರಕ್ಷಣಾ ಸಚಿವೆ ಸೀತಾರಾಮಮ್ ಹೇಳಿದ್ದು ಹೀಗೆ

ಬೆಂಗಳೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭಾನುವಾರ ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ “ಉರಿ  ದಿ ಸರ್ಜಿಕಲ್ ಸ್ಟ್ರೈಕ್” ಹಿಂದಿ ಚಿತ್ರವನ್ನು ವೀಕ್ಷಿಸಿದ್ದಾರೆ .ಬೆಂಗಳುರಿನಲ್ಲಿ ಚಿತ್ರ ವೀಕ್ಷಣೆ ಮಾಡಿದ ಸಚಿವರು ದೇಶಭಕ್ತಿಯ ಚಿತ್ರಣ ಹೊಂದಿರುವ ಚಿತ್ರವು “ಹೈ ಜೋಷ್” ನೀಡಲಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಬೆಂಗಳೂರು ಸೆಂಟ್ರಲ್ ಮಾಲ್ ನಲ್ಲಿ ಮಾಜಿ  ಸೈನಿಕರ ಜತೆ ಕುಳಿತು ಸಚಿವೆ ನಿರ್ಮಲಾ ಸೀತಾರಾಮನ್ ಚಿತ್ರ ವೀಕ್ಷಣೆ ಮಾಡಿದ್ದಾರೆ. ಪಾಕಿಸ್ತಾನದ ಆಕ್ರಮಿತ ಕಾಶ್ಮೀರದ ಭಯೋತ್ಪಾದನಾ ತಾಣಗಳ ಮೇಲೆ ರಾತ್ರೋರಾತ್ರಿ ಭಾರತೀಯ ಸೈನಿಕರು ನಡೆಸಿದ ಸರ್ಜಿಕಲ್ ದಾಳಿಯ ಕಥೆಯನ್ನಾಧರಿಸಿ “ಉರಿ” ಚಿತ್ರ ತಯಾರಾಗಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ಭಾರತೀಯ ಸೈನಿಕರ ಸಾಧನೆಯನ್ನು ರೋಚಕವಾಗಿ ತೋರಿಸಲಾಗಿದೆ. ಸಚಿವರು ಮಾಲ್ ಗೆ ಭೇಟಿ ನೀಡುತ್ತಿದ್ದಂತೆ ಪ್ರೇಕ್ಷಕರು, ಸಾರ್ವಜನಿಕರು ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿ ಅವರಿಗೆ ಸ್ವಾಗತ ನಿಡಿದ್ದಾರೆ. ಜನವರಿ 16ರಂದು, ಸೀತಾರಾಮನ್ ಚಿತ್ರದ ನಟ ಮತ್ತು ಸಿಬ್ಬಂದಿಗಳನ್ನು ನವ ದೆಹಲಿಯಲ್ಲಿ ಭೇಟಿ ಮಾಡಿದ್ದರು,

About the author

ಕನ್ನಡ ಟುಡೆ

Leave a Comment