ರಾಜ್ಯ ಸುದ್ದಿ

ಬೆಂಗಳೂರು: ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು: ವೈಮಾನಿಕ ಮತ್ತು ಮಿಲಿಟರಿ ಕ್ಷೇತ್ರಗಳ ತಂತ್ರಜ್ಞಾನ, ಉತ್ಪನ್ನಗಳ ಅನಾವರಣಗೊಳಿಸುವ ಏಷಿಯಾದ ಅತಿದೊಡ್ಡ, ಪ್ರತಿಷ್ಠಿತ ‘ಏರೋ ಇಂಡಿಯಾ 2019’ ಹನ್ನೆರಡನೇ ಆವೃತ್ತಿಗೆ ಬುಧವಾರ ಬೆಳಗ್ಗೆ 9 ಗಂಟೆಗೆ ಯಲಹಂಕ ವಾಯುನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದರು.
ನಿನ್ನೆ ತಾಲೀಮು ವೇಳೆ ಸೂರ್ಯಕಿರಣ ಲಘು ವಿಮಾನ ಡಿಕ್ಕಿ ಹೊಡೆದು ಮೃತಪಟ್ಟಿದ್ದ ಪೈಲಟ್ ಸಾಹಿಲ್ ಗಾಂಧಿಗೆ ಎರಡು ನಿಮಿಷಗಳ ಕಾಲ ಸಂತಾಪ ಸೂಚಿಸಿ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭದಲ್ಲಿ ಭಾರತೀಯ ವೈಮಾನಿಕ ಪ್ರದರ್ಶನ ಕುರಿತು ಪುಸ್ತಕ ಬಿಡುಗಡೆ ಮಾಡಲಾಯಿತು. ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು, ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ಎಚ್‌ಎಎಲ್‌, ಡಿಆರ್‌ಡಿಒ, ದೇಶದ ಮೂರು ಸೇನಾಪಡೆಗಳ ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿಮಾನ, ಹೆಲಿಕಾಪ್ಟರ್‌ಗಳು, ನಾಗರಿಕ ವಿಮಾನಗಳು ವೈಮಾನಿಕ ಪ್ರದರ್ಶನವನ್ನು ನೀಡಲಿವೆ. ದೇಶ-ವಿದೇಶಗಳ ನೂರಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಈ ವೇಳೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಒಪ್ಪಂದಗಳು, ಅಭಿವೃದ್ಧಿ ಒಪ್ಪಂದಗಳು, ಮಾರಾಟ, ಖರೀದಿಗೆ ಸಹಿ ಬೀಳಲಿವೆ.
ಈ ವರ್ಷ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿ.
ಈ ಪ್ರದರ್ಶನ ರಕ್ಷಣಾ ಮತ್ತು ತಂತ್ರಜ್ಞಾನ ಇಲಾಖೆಗಳ ವ್ಯಾಪಾರಕ್ಕೆ ಉತ್ತಮ ವೇದಿಕೆ ಮಾತ್ರವಲ್ಲದೆ, ಈ ಕ್ಷೇತ್ರಗಳ ಬಗ್ಗೆ ಅನೇಕ ಜ್ಞಾನವನ್ನು ಹಂಚಿಕೊಳ್ಳಲಾಗುತ್ತದೆ.
ಈ ವರ್ಷದ ಪ್ರದರ್ಶನ ಭಾರತದ ವೈಮಾನಿಕ ಪ್ರದರ್ಶನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡದಾಗಿದ್ದು 51 ದೇಶಗಳು ಮತ್ತು 44 ಅಧಿಕಾರಿ ನಿಯೋಗಗಳು ಭಾಗವಹಿಸುತ್ತಿವೆ. ವೈಮಾನಿಕ ಪ್ರದರ್ಶನದ ಇಂದಿನ ಕಾರ್ಯಕ್ರಮಗಳ ಪಟ್ಟಿ ಇಂತಿದೆ.

About the author

ಕನ್ನಡ ಟುಡೆ

Leave a Comment