ರಾಜ್ಯ ಸುದ್ದಿ

ಬೆಂಗಳೂರು: ಚಿನ್ನ ಕಳ್ಳಸಾಗಣೆ ಮಾಡಿ ಸಿಕ್ಕಿ ಬಿದ್ದ ಮಾಡೆಲ್‌

ಬೆಂಗಳೂರು: ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಮಾಡೆಲ್‌ ಒಬ್ಬಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೀಮಾ ಸುಂಕ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.  24 ವರ್ಷದ ಮಾಡೆಲ್‌ ಬಳಿಯಿಂದ 15 ಲಕ್ಷ ರೂ. ಬೆಲೆಬಾಳುವ 450 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ. ಜ.16ರಂದು ದುಬೈನಿಂದ ಎತಿಹಾದ್‌ ವಿಮಾನದಲ್ಲಿ ಬಂದ ಮಾಡೆಲ್‌ ಅನ್ನು ಅನುಮಾನದ ಮೇಲೆ ತಪಾಸಣೆಗೆ ಒಳಪಡಿಸಿದಾಗ ಆಕೆ ಪೇಸ್ಟ್‌ ರೂಪದಲ್ಲಿ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ಸೊಂಟಕ್ಕೆ ಸುತ್ತಿಕೊಂಡಿದ್ದ ಬಟ್ಟೆತ ಬೆಲ್ಟ್‌ನಲ್ಲಿ ಒಟ್ಟು 887 ಗ್ರಾಂ ಚಿನ್ನದ ಪೇಸ್ಟ್‌ನ್ನು ತುಂಬಲಾಗಿತ್ತು. ಅದನ್ನು ಜಪ್ತಿ ಮಾಡಿ ಕರಗಿಸಿ 450 ಗ್ರಾಂ ಚಿನ್ನ ತೆಗೆಯಲಾಗಿದೆ. ತಮಿಳುನಾಡು ಮೂಲದ ಯುವತಿಯು, ಕಿರುತೆರೆಯಲ್ಲಿ ನಟಿಸಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಾಡೆಲ್‌ಗಳ ಬಳಕೆ: ಚಿನ್ನ ಕಳ್ಳಸಾಗಣೆಯಲ್ಲಿ ತೊಡಗಿರುವ ಜಾಲಗಳು, ಇತ್ತೀಚೆಗೆ ಯುವ ಮಾಡೆಲ್‌ಗಳು, ನಟರನ್ನು ಹೆಚ್ಚಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಪ್ರವಾಸ, ವಾಸ್ತವ್ಯ, ಊಟದ ವ್ಯವಸ್ಥೆಯ ಅಮಿಷ ಒಡ್ಡಿ ವಿದೇಶಕ್ಕೆ ಕಳುಹಿಸುತ್ತಿದ್ದಾರೆ. ಬರುವಾಗ ಚಿನ್ನ ಸಾಗಿಸಲು ಹೇಳುತ್ತಾರೆ. ಮಾಡೆಲ್‌ಗಳು ಇಂಥ ವ್ಯವಹಾರಕ್ಕೆ ಇಳಿಯಬಾರದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment