ರಾಜ್ಯ ಸುದ್ದಿ

ಬೆಂಗಳೂರು: ತಹಸೀಲ್ದಾರ್ ಗೆ ಬೆದರಿಕೆ, ಎಸಿಬಿ ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು: ಗುಂಡ್ಲುಪೇಟೆ ತಹಸೀಲ್ದಾರ್ ಬಿ.ಕೆ. ಸುದರ್ಶನ್ ಅವರಿಗೆ ಬೆದರಿಕೆವೊಡ್ಡಿದ ಆರೋಪದ ಮೇರೆಗೆ ಭ್ರಷ್ಟಾಚಾರ ನಿಯಂತ್ರ ದಳದ ಅಧಿಕಾರಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.ಭ್ರಷ್ಟಾಚಾರ ನಿಯಂತ್ರಣ ದಳದ ಅಧಿಕಾರಿ ಬೆಂಗಳೂರಿನ ಪ್ರಸಾದ್ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಕರ್ತವ್ಯಕ್ಕೆ ಚುತಿ ತಂದಿದ್ದಾರೆ ಎಂದು ಆರೋಪಿಸಿ  ತಹಸೀಲ್ದಾರ್  ಸುದರ್ಶನ್ ನಿನ್ನೆ ಬೆಳಗ್ಗೆ ದೂರು ದಾಖಲಿಸಿದ್ದರು.

ಬೇಗೂರು ಗ್ರಾಮದಲ್ಲಿ  ಅಕ್ರಮವಾಗಿ ತೇಗದ ಮರಗಳನ್ನು ಕಡಿಯಲಾಗಿತ್ತು, ಅಲ್ಲಿಗೆ  ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಿದ ನಂತರ  ತಹಸೀಲ್ದಾರ್  ದೂರು ದಾಖಲಿಸಿದ್ದರು. ತಹಸೀಲ್ದಾರ್ ಗೆ ಕರೆ ಮಾಡಿರುವ ಎಸಿಬಿ ಪ್ರಸಾದ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಮೂರು ನಿಮಿಷಗಳ ಸಂಭಾಷಣೆಯಲ್ಲಿ ಅದು ಅರಣ್ಯ ಇಲಾಖೆ ಮಾಡಬೇಕಾದ ಕೆಲಸವಾಗಿದ್ದು, ನೀನ್ಯಾಕೆ ಮಾಡಿದೆ ಎಂದು ಪ್ರಶ್ನಿಸಿದಲ್ಲದೇ, ಬೆದರಿಕೆ ಹಾಕಿದ್ದಾನೆ. ಈ ಆಡಿಯೋ ಕ್ಲಿಪ್ ಮಾಧ್ಯಮಗಳಿಗೆ  ಹಂಚಿಕೆ ಮಾಡಲಾಗಿದ್ದು, ಇತ್ತೀಚಿಗೆ ನೇಮಕಗೊಂಡಿದ್ದ ತಹಸೀಲ್ದಾರ್ ಗೆ ಪ್ರಸಾದ್  ನಿಂದನೆ ಮಾಡಿರುವುದು ಇದರಿಂದ ಸ್ಪಷ್ಟವಾಗಿತ್ತು. ನಂತರ ತಹಸೀಲ್ದಾರ್ ಐಪಿಸಿ ಸೆಕ್ಷನ್ 353 , ಸೆಕ್ಷನ್ 506, ಹಾಗೂ  ಸೆಕ್ಷನ್ 494, 500 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

About the author

ಕನ್ನಡ ಟುಡೆ

Leave a Comment