ರಾಜ್ಯ ಸುದ್ದಿ

ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಕೆ. ಅಣ್ಣಾಮಲೈ ಅಧಿಕಾರ ಸ್ವೀಕಾರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಮತ್ತೊಬ್ಬ ದಕ್ಷ ಪೊಲೀಸ್ ಅಧಿಕಾರಿಯ ಎಂಟ್ರಿಯಾಗಿದೆ. ಕರ್ನಾಟಕ ಸಿಂಗಂ ಖ್ಯಾತಿಯ  ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಚಿಕ್ಕಮಗಳೂರು ಎಸ್ಪಿಯಾಗಿದ್ದ  ಅಣ್ಣಾಮಲೈ ಖಡಕ್ ಅಫೀಸರ್ ಎಂದೇ ಹೆಸರಾಗಿದ್ದು,  ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯಲ್ಲಿ ನಿನ್ನೆ  ನಿರ್ಗಮಿತ ಡಿಸಿಪಿ ಶರಣಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಸರ್ಕಾರದ ಆದೇಶದಂತೆ ಡಿಸಿಪಿಯಾಗಿ ವರ್ಗಾವಣೆಯಾಗಿದ್ದು, ತಮ್ಮ ಮೇಲೆ ಹೊಣೆಗಾರಿಕೆ ಹೆಚ್ಚಿದೆ ಎಂದು ತಿಳಿಸಿದರು. ನಾನು ಈಗ ಸದ್ಯ ಮಗುವಾಗಿದ್ದೇನೆ. ಹುಟ್ಟಿದಾಗ ಮಗು ಹೇಗಿರುತ್ತದೆಯೋ ಹಾಗೆಯೇ ಇದ್ದೇನೆ. ನನ್ನಗೆ ಬೆಂಗಳೂರು  ಬಗ್ಗೆ ಏನೂ ಗೊತ್ತಿಲ್ಲ. ಏರಿಯಾಗಳ ಹೆಸರೂ ತಿಳಿದಿಲ್ಲ. ಒಂದು ವಾರ ಸಮಯ ಕೊಡಿ ತಿಳಿದುಕೊಳ್ಳುತ್ತೇನೆ. ನಂತರ  ಏಲ್ಲೆಲ್ಲಿ ಏನೇನು ಕೆಲಸ ಮಾಡಬೇಕು ಎಂದು ನಿರ್ಧರಿಸುತ್ತೇನೆ ಎಂದು ಹೇಳಿದರು. ಬನಶಂಕರಿ, ಹನುಮಂತನಗರ, ಚನ್ನಮ್ಮನಕೆರೆ ಅಚ್ಚುಕಟ್ಟು, ಗಿರಿನಗರ, ಜೆ ಪಿನಗರ ಹಾಗೂ ಪುಟ್ಟನೇಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳು   ದಕ್ಷಿಣ  ವಲಯ ವ್ಯಾಪ್ತಿಯಲ್ಲಿ  ಬರಲಿದ್ದು, ಅಪರಾಧ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿವೆ.ಅಪರಾಧ ಪ್ರಕರಣಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ, ದಕ್ಷ ಅಧಿಕಾರಿ ಎಂದೇ ರಾಜ್ಯಾದ್ಯಂತ ಹೆಸರಾಗಿರುವ  ಚಿಕ್ಕಮಗಳೂರು ಎಸ್ಪಿಯಾಗಿದ್ದ ಕೆ. ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ವಿಭಾಗೀಯ ಡಿಸಿಪಿಯಾಗಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.ಪಶ್ಚಿಮ ವಲಯದಲ್ಲಿ ಈಗಾಗಲೇ  ರವಿ ಚೆನ್ನಣ್ಣವರ್,  ಡಿಸಿಪಿಯಾಗಿದ್ದು, ಮತ್ತೋರ್ವ ದಕ್ಷ ಅಧಿಕಾರ ಅಣ್ಣಾಮಲೈ ಅವರು ದಕ್ಷಿಣ ವಲಯದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಇದೀಗ ಸಿಲಿಕಾನ್ ಸಿಟಿ ರೌಡಿಗಳಲ್ಲಿ ನಡುಕು ಉಂಟಾಗಿದೆ.

About the author

ಕನ್ನಡ ಟುಡೆ

Leave a Comment