ರಾಜ್ಯ ಸುದ್ದಿ

ಬೆಂಗಳೂರು: ನಗರದ ವಿವಿಧೆಡೆ ಅಧಿಕಾರಿಗಳ ದಾಳಿ, ಭಾರೀ GST ವಂಚನೆ

ಬೆಂಗಳೂರು: ನಗರದ ವಿವಿಧೆಡೆ ಬುಧವಾರ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು,  ಭಾರೀ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಟಿ.ದಾಸರಹಳ್ಳಿ, ಚಿಕ್ಕಬಾಣಾವರದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೇರೆ ವ್ಯಕ್ತಿಗಳ ಹೆಸರಿನಲ್ಲಿ 12 ಕಂಪೆನಿಗಳನ್ನು ನಡೆಸುತ್ತಿದ್ದ  ವಿಕ್ರಮ್‌ ದುಗಾಲ್‌ ಮತ್ತು ಮೂವರನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.

ಅಧಿಕಾರಿಗಳು ಸುಮಾರು 203 ಕೋಟಿ ರೂಪಾಯಿ ತೆರಿಗೆ ವಂಚನೆಯ ನಕಲಿ ಬಿಲ್‌ಗ‌ಳನ್ನು  ಪತ್ತೆ ಹಚ್ಚಿರುವ ಬಗ್ಗೆ ವರದಿಯಾಗಿದೆ. ದಾಳಿ ವೇಳೇ ಹಲವು ದಾಖಲೆಗಳು, ಕಡತಗಳು ಮತ್ತು ಲ್ಯಾಪ್‌ಟಾಪ್‌ಗಳು  ಪತ್ತೆಯಾಗಿದ್ದು, ಪರಿಶೀಲನೆ ಮುಂದುವರಿದಿದೆ. ವಂಚನೆಯ ಕಿಂಗ್‌ಪಿನ್‌ ವಿಕ್ರಮ್‌ ದುಗಾಲ್‌ ಎಂದು ತಿಳಿದು ಬಂದಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

 

About the author

ಕನ್ನಡ ಟುಡೆ

Leave a Comment