ತಂತ್ರಜ್ಞಾನ

ಬೆಂಗಳೂರು ಬಾಹ್ಯಾಕಾಶ ಎಕ್ಸ್ ಪೋ- 2018 ಗಗನಯಾನ ಆಕರ್ಷಣೆ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ವಲಯದಲ್ಲಿ ‘ಗಗನಯಾನ’ ಎನ್ನುವ ಶಬ್ದ ಈಗ ಬಹಳ ಮುಂಚೂಣಿಯಲ್ಲಿದೆ., ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಬೆಂಗಳೂರು ಬಾಹ್ಯಾಕಾಶ ಎಕ್ಸ್ ಪೋ- 2018ರಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗಿರುವ ನಿರೀಕ್ಷೆ ಇದೆ. ಬೆಂಗಳೂರು ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ನಲ್ಲಿ ಇದೇ ಸೆಪ್ಟೆಂಬರ್ 6 ರಿಂದ 8 ರವರೆಗೆ ಮೂರು ದಿನಗಳ ಕಾಲ ಆರನೇ ಆವೃತ್ತಿಯಬೆಂಗಳೂರು ಬಾಹ್ಯಾಕಾಶ ಎಕ್ಸ್ ಪೋ ನಡೆಯಲಿದೆ. ಇದರಲ್ಲಿ ಇದಾಗಲೇ ಅಭಿವೃದ್ಧಿಪಡಿಸಿದ ಕೆಲವು ಅಗತ್ಯ ತಂತ್ರಜ್ಞಾನಗಳನ್ನು ಪ್ರದರ್ಶಿಸಲು ಇಸ್ರೋ  ಒಂದು ಪ್ರತ್ಯೇಕ ವಿಭಾಗವನ್ನು ನಿರ್ಮಿಸುತ್ತಿದೆ. ಇಸ್ರೋ ಅಧ್ಯಕ್ಷ . ಶಿವನ್ ಅವರು ಇತ್ತೀಚೆಗೆ ಈ ವಿಷಯವನ್ನು ಮಾದ್ಯಮಗಳಿಗೆ ಬಹಿರಂಗಪಡಿಸಿದ್ದರು.’ಪ್ರದರ್ಶನದ ಮೂರು ದಿನಗಳಲ್ಲಿ ‘ಗಗನಯಾನ’ ಎನ್ನುವುದು ಕೇಂದ್ರಬಿಂದು ಅಥವಾ ಮುಖ್ಯ ಆಕರ್ಷಣೆಯಾಗಿರಲಿದೆ.’ ಎಂದು ಅವರು ಹೇಳಿದ್ದಾರೆ.
ಎಕ್ಸ್ ಪೋ ಅನ್ನು ಇಸ್ರೋ ಸಹಯೋಗದೊಡನೆ ಭಾರತೀಯ ಉದ್ಯಮಗಳ ಒಕ್ಕುಟ (ಸಿಐಐ)  ಆಯೋಜಿಸಿದ್ದು ಪ್ರದರ್ಶ್ನದಲ್ಲಿ ಏನೇನು ಇರಲಿದೆ ಎನ್ನುವುದು ಬುಧವಾರದ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆ ಇದೆ.  ವಿದ್ಯಾರ್ಥಿಗಳಿಗಾಗಿ ಎಕ್ಸ್ ಪೋ ದಲ್ಲಿ ವಿಶೇಷ ಅಧಿವೇಶನ ಆಯೋಜಿಸುವ ನಿರೀಕ್ಷೆ ಇದೆ. ಮೂರು ದಿನಗಳ ಕಾರ್ಯಕ್ರ್ಮದಲ್ಲಿ ಗಗನಯಾನದ ಸಂಬಂಧ ವಿಶೇಷ ಅಧಿವೇಶನ ಸೆ. 8 ರಂದು ನಡೆಯಲಿದೆ. ವಿವಿಧ ಶಾಲೆಗಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸಂವಾದಕ್ಕಾಗಿ ವೇದಿಕೆ ಕಲ್ಪಿಸಲಾಗುತ್ತದೆ.
ಇದರೊಡನೆ ಪ್ರದರ್ಶನದಲ್ಲಿ “ವರ್ಲ್ಡ್ ಸ್ಪೇಸ್ ಬಿಝ್” ಕುರಿತಂತೆ  ಅಂತರಾಷ್ಟ್ರೀಯ ಸಮ್ಮೇಳನವನ್ನು ಕೂಡಾ ನಡೆಸಲಾಗುತ್ತಿದೆ.ಅಂತರಾಷ್ಟ್ರೀಯ ಸಮ್ಮೇಳನದಲ್ಲಿ  ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಭಾಗವಹಿಸಲಿದೆ. ಉಪಗ್ರಹ ಉಡಾವಣೆ ವಾಹನ ವಲಯದಲ್ಲಿನ ಅವಕಾಶಗಳು,  ಬಾಹ್ಯಾಕಾಶ ವಲಯದಲ್ಲಿ ಕೈಗಾರಿಕೆಗಳಿಗೆ ಇರಬಹುದಾದ ಅವಕಾಶಗಳು,  ಜಾಗತಿಕ ಮಾರುಕಟ್ಟೆ ಸನ್ನಿವೇಶ ಇತರೇ ವಿಚಾರದ ಕುರಿತು ಚರ್ಚೆ ನಡೆಸಲಾಗುತ್ತದೆ. ಫ್ರಾನ್ಸ್, ರಷ್ಯಾ ಮತ್ತು ತೈವಾನ್ ಗಳ ಪ್ರತಿನಿಧಿಗಳು ಮತ್ತು ಸಂಸ್ಥೆಗಳು ಈ ಎಕ್ಸ್ ಪೋ ದಲ್ಲಿ ಭಾಗವಹಿಸುತ್ತದೆ ಎಂದು ಸಿಐಐ ಹೇಳಿದೆ.100 ಪ್ರದರ್ಶಕರು, 56 ಭಾಷಣಕಾರರು,  600 ಪ್ರತಿನಿಧಿಗಳು ಈ ಸಮಾವೇಶದಲ್ಲಿ ಪಾಲ್ಗೊಳ್ಳುವುದಾಗಿ  ಸಿಐಐ ಉಪಾಧ್ಯಕ್ಷ ವಿಕ್ರಮ್ ಕಿರ್ಲೋಸ್ಕರ್ಹೇಳಿದ್ದಾರೆ. 16 ಇಸ್ರೋ ಕೇಂದ್ರಗಳ ಸಿಬ್ಬಂದಿಗಳು ಒಂದೇ ಸೂರಿನಡಿ ಸೇರಲಿದ್ದಾರೆ.ನ್ಯಾಶನಲ್ ಸೆಂಟರ್ ಫಾರ್ ಸ್ಪೇಸ್ ಸ್ಟಡೀಸ್ (ಸಿಎನ್ಇಎಸ್) ನ ಅಧ್ಯಕ್ಷ ಜೀನ್ ಯೇಸ್ ಲೆ ಗಾಲ್ಇದರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

About the author

ಕನ್ನಡ ಟುಡೆ

Leave a Comment