ರಾಜ್ಯ ಸುದ್ದಿ

ಬೆಂಗಳೂರು ರಸ್ತೆಗಳಲ್ಲಿ ಡಿಸಿಎಂ ಪರಮೇಶ್ವರ್ ಪುತ್ರಿ ಶನಾ ರ್‍ಯಾಷ್ ಡ್ರೈವ್, ವಿಡಿಯೋ ಡಿಲೀಟ್

ಬೆಂಗಳೂರು: ಲಿಂಗ ಪರಿವರ್ತಿಸಿಕೊಂಡು ಹುಡುಗಿಯಾಗಿ ಬದಲಾಗಿದ್ದ ಉಪ ಮುಖ್ಯಮಂತ್ರಿ ಡಾ. ಜಿ ಪರಮೇಶ್ವರ್ ಅವರ ಪುತ್ರಿ ಶನಾ ಪರಮೇಶ್ವರ್ ಇದೀಗ ಬೆಂಗಳೂರು ರಸ್ತೆಗಳಲ್ಲಿ ಅಡ್ಡದಿಡ್ಡಿ ಕಾರನ್ನು ಚಲಾಯಿಸಿ ಸುದ್ದಿಯಾಗಿದ್ದಾರೆ.
ಐಷರಾಮಿ ಕಾರನ್ನು ಹೊಂದಿರುವ ಡಿಸಿಎಂ ಪುತ್ರಿ ಶನಾ ಪರಮೇಶ್ವರ್ ದರ್ಬಾರ್ ನಡೆಸುತ್ತಾ ರಸ್ತೆಯಲ್ಲಿ ಮನಬಂದಂತೆ ಕಾರು ಚಲಾಯಿಸುತ್ತಿದ್ದಾರೆ. ಜನನಿಬಿಡ ರಸ್ತೆಯಲ್ಲೇ ಶನಾ ಡ್ರ್ಯಾಗ್ ರೇಸ್ ವ್ಹೀಲಿಂಗ್ ಮಾಡುತ್ತಿದ್ದರು. ಸದ್ಯ ಸಾಮಾಜಿಕ ಜಾಲತಾಣದಲ್ಲಿದ್ದ ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ. ಶನಾ ರ್‍ಯಾಷ್ ಡ್ರೈವ್ ಮಾಡುತ್ತಿರುವುರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ ಇಲ್ಲಿಯವರೆಗೂ ಡಿಸಿಎಂ ಮಗಳ ಈ ವರ್ತನೆಗೆ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಲವಾರು ಬೈಕ್ ಸವಾರರು ಶನಾ ಕಾರಿನ ಹಿಂದೆ ಹೋಗುತ್ತಾ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಇದು ಡಾಕ್ಯುಮೆಂಟರಿಗಾಗಿ ತಯಾರಿಸಿದ ವಿಡಿಯೋನಾ ಅಥವಾ ಶನಾ ರ್‍ಯಾಷ್ ಡ್ರೈವ್ ಮಾಡಿದ್ದಾರೆ ಎಂದು ತಿಳಿಯಬೇಕಿದೆ.

About the author

ಕನ್ನಡ ಟುಡೆ

Leave a Comment