ರಾಜ್ಯ ಸುದ್ದಿ

ಬೆಂಗಳೂರು ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಶೇ.120ರಷ್ಟು ಏರಿಕೆ

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಯಾಣಿಕರ ಮೇಲೆ ವಿಧಿಸುವ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು(ಯುಡಿಎಫ್) ಬರೋಬ್ಬರಿ ಶೇ.120 ರಷ್ಟು ಏರಿಕೆ ಮಾಡಿ ಪ್ರಯಾಣಿಕರಿಗೆ ಶಾಕ್ ನೀಡಿದ್ದು, ನೂತನ ದರ ನಾಳೆಯಿಂದಲೇ ಜಾರಿಗೆ ಬರಲಿದೆ. ಬೆಂಗಳೂರು ವಿಮಾನ ನಿಲ್ದಾಣ ದೆಹಲಿ ಮತ್ತು ಮುಂಬೈ ನಂತರ ದೇಶದ ಮೂರನೇ ಬ್ಯುಸಿಯಸ್ಟ್ ವಿಮಾನ ನಿಲ್ದಾಣವಾಗಿದ್ದು, ದೇಶಿಯ ಬಳಕೆದಾರರ ಶುಲ್ಕವನ್ನು 139 ರು. ನಿಂದ 306 ರುಪಾಯಿಗೆ ಹಾಗೂ ಅಂತರಾಷ್ಟ್ರೀಯ ಬಳಕೆದಾರರ ಶುಲ್ಕವನ್ನು 558 ರು.ನಿಂದ 1,226 ರುಪಾಯಿಗೆ ಹೆಚ್ಚಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಕಟಣೆಯಲ್ಲಿ ತಿಳಿಸಿದೆ.

ನಾಲ್ಕು ತಿಂಗಳ ಅವಧಿಗೆ ಬಳಕೆದಾರರ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ದೇಶಿಯ ಯುಡಿಎಫ್ ಅನ್ನು ಶೇ.120ರಷ್ಟು ಹಾಗೂ ಅಂತರಾಷ್ಟ್ರೀಯ ಯುಡಿಎಫ್ ಶೇ.119ರಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ 16ರಿಂದ ಆಗಸ್ಟ್ 15 ರೊಳಗೆ ಟಿಕೆಟ್ ಬುಕ್ ಮಾಡುವವರಿಗೆ ಈ ನೂತನ ದರ ಅನ್ವಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ನಿಲ್ದಾಣದ ದಟ್ಟಣೆ ಹೆಚ್ಚುತ್ತಿರುವ ಕಾರಣ ನೂತನ ಟರ್ಮಿನಲ್‌ (ಟಿ2) ಹಾಗೂ 2ನೇ ರನ್‌ ವೇ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮಾರ್ಚ್ 2021ಕ್ಕೆ ಪೂರ್ಣಗೊಳ್ಳಲಿದೆ ಎಂದು ಕಂಪನಿ ತಿಳಿಸಿದೆ.

About the author

ಕನ್ನಡ ಟುಡೆ

Leave a Comment