ಕ್ರೀಡೆ

ಬೆಂಗಾಲ್ ವಾರಿಯರ್ಸ್ ವಿರುದ್ಧ ದಬಂಗ್ ದೆಹಲಿ ತಂಡ ಜಯಭೇರಿ

ದೆಹಲಿ ಜಯಭೇರಿ: ರೈಡರ್ ನವೀನ್ ಕುಮಾರ್(11 ಅಂಕ) ಮತ್ತು ಡಿಫೆಂಡರ್ ರವೀಂದರ್ ಪೆಹಲ್(4) ಉತ್ತಮ ನಿರ್ವಹಣೆಯ ನೆರವಿನಿಂದ ದಬಂಗ್ ದೆಹಲಿ ತಂಡ ಟೂರ್ನಿಯ ತನ್ನ 4ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ವಿರುದ್ಧ ಗೆಲುವಿನ ನಗೆ ಬೀರಿತು. ದಿನದ ಮೊದಲ ಪಂದ್ಯದಲ್ಲಿ ದಬಂಗ್ ದೆಹಲಿ ತಂಡ 39-30 ಅಂಕಗಳಿಂದ ಬೆಂಗಾಲ್ ತಂಡವನ್ನು ಸೋಲಿಸಿತು. ಇದು ದೆಹಲಿ ತಂಡಕ್ಕೆ ಹಾಲಿ ಆವೃತ್ತಿಯ 2ನೇ ಗೆಲುವಾದರೆ, ಬೆಂಗಾಲ್​ಗೆ ಮೊದಲ ಸೋಲಾಗಿದೆ. ಪ್ರಥಮಾರ್ಧದಲ್ಲಿ ಮುನ್ನಡೆ ಕಂಡಿದ್ದ ದೆಹಲಿ ತಂಡ ದ್ವಿತೀಯಾರ್ಧದಲ್ಲೂ ಅದೇ ನಿರ್ವಹಣೆ ಮುಂದುವರಿಸಿತು. ಬಲಿಷ್ಠ ಡಿಫೆಂಡರ್​ಗಳಾದ ರವೀಂದರ್ ಪೆಹಲ್ ಮತ್ತು ವಿಶಾಲ್ ಮಾನೆ ಕೊನೇ 20 ನಿಮಿಷಗಳ ಅವಧಿಯಲ್ಲಿ ಬೆಂಗಾಲ್ ರೈಡರ್​ಗಳ ಪಾಲಿಗೆ ದುಃಸ್ವಪ್ನರಾದರು.

About the author

ಕನ್ನಡ ಟುಡೆ

Leave a Comment