ಅ೦ತರಾಷ್ಟ್ರೀಯ

ಬೆಗ್ಗಿಂಗ್’ ಚೀನಾ ಭೇಟಿ ವೇಳೆ ಪ್ರಧಾನಿ ಇಮ್ರಾನ್ ಖಾನ್ ಟ್ರೋಲ್

ಇಸ್ಲಾಮಾಬಾದ್: ಸರ್ಕಾರ ನಡೆಸಲು ನಮ್ಮ ಬಳಿ ದುಡ್ಡಿಲ್ಲ ಎಂದು ನಗೆಗೀಡಾಗಿದ್ದ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಇದೀಗ ಚೀನಾ ನೆಲದಲ್ಲಿ ಮತ್ತೆ ನಗೆಗೀಡಾಗಿದ್ದಾರೆ. ಇಮ್ರಾನ್ ಖಾನ್ ಚೀನಾ ಭೇಟಿಯಾ ನೇರಪ್ರಸಾರವನ್ನು ಮಾಡುತ್ತಿದ್ದ ಪಾಕಿಸ್ತಾನದ ಸರ್ಕಾರಿ ಸೌಮ್ಯದ ಚಾನೆಲ್ ಪಾಕಿಸ್ತಾನ ಟೆಲಿವಿಷನ್ ಕಾರ್ಪೋರೇಷನ್(ಪಿಟಿವಿ) ಪರದೆಯಲ್ಲಿ ಬಿಜಿಂಗ್ ಎಂದು ಬರೆಯುವ ಬದಲಿಗೆ ಬೆಗ್ಗಿಂಗ್(ಭಿಕ್ಷಾಟನೆ) ಎಂದು ಬರೆದಿದ್ದು ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಇಮ್ರಾನ್ ರನ್ನು ಟ್ರೋಲ್ ಮಾಡುತ್ತಿದ್ದಾರೆ. ಚೀನಾದ ಕಮ್ಯೂನಿಸ್ಟ್ ಪಾರ್ಟಿಯ ಸೆಂಟ್ರಲ್ ಪಾರ್ಟಿ ಸ್ಕೂಲ್ ನಲ್ಲಿ ಇಮ್ರಾನ್ ಖಾನ್ ಅವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಪಿಟಿವಿಯ ಚಾನೆಲ್ ನಲ್ಲಿ ಬೆಗ್ಗಿಂಗ್ ಎಂದು ಬರೆದಿದ್ದು ಅವರನ್ನು ಟ್ರೋಲ್ ಮಾಡಲು ಕಾರಣವಾಗಿದೆ.

About the author

ಕನ್ನಡ ಟುಡೆ

Leave a Comment