ರಾಜ್ಯ ಸುದ್ದಿ

ಬೆಳಗಾವಿ: ಮಹಿಳಾ ಸಬಲೀಕರಣಕ್ಕೆ ಪೊಲೀಸರಿಂದ ಸೈಕಲ್​ ಜಾಥಾ

ಬೆಳಗಾವಿ: ಮಹಿಳಾ ಸಬಲೀಕರಣದ ಜಾಗೃತಿ ಮೂಡಿಸಲು ಕೆಎಸ್ಆರ್​ಪಿ ಬೆಳಗಾವಿಯಿಂದ ಬೆಂಗಳೂರಿನವರೆಗೆ ಐದು ದಿನಗಳ ಕಾಲ ಆಯೋಜಿಸಿರುವ ಸೈಕಲ್​​ ಜಾಥಾಕ್ಕೆ ಇಂದು ಚಾಲನೆ ಸಿಕ್ಕಿದೆ. ಎಡಿಜಿಪಿ ಭಾಸ್ಕರ್ ರಾವ್ ನೇತೃತ್ವದಲ್ಲಿ 100 ಮಹಿಳಾ ಪೊಲೀಸರು ಈ ಜಾಥಾದಲ್ಲಿ ಭಾಗಿಯಾಗಿದ್ದಾರೆ.

ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣವರ್, ಜಿಲ್ಲಾಧಿಕಾರಿ ಡಾ.ಎಸ್.ವಿ.ಬೊಮ್ಮನಹಳ್ಳಿ, ಕೆಎಲ್ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಉಪನಿರ್ದೇಶಕ ಸೀಬಿರಂಗಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

About the author

ಕನ್ನಡ ಟುಡೆ

Leave a Comment