ರಾಜ್ಯ ಸುದ್ದಿ

ಬೆಳಗಾವಿ: ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರ ಸಾವು

ರಾಮದುರ್ಗ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕು ಕೆ.ತಿಮ್ಮಾಪುರ ಗ್ರಾಮದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ರೇವಪ್ಪ ಕಲ್ಲೋಳಿ (35), ರತ್ನವ್ವ ಕಲ್ಲೋಳಿ (30), ಪುತ್ರ ಸಚಿನ್ (8) ಹಾಗೂ ರೇವಪ್ಪನ ಅಣ್ಣನ ಮಗ ಮೃತರು. ರಾತ್ರಿ ಸುರಿದ ಗಾಳಿ ಮಳೆಗೆ ಇವರ ಹೊಲದ ದಾರಿಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಬೆಳಗ್ಗೆ ಹೊಲಕ್ಕೆ ಎತ್ತಿನಗಾಡಿಯಲ್ಲಿ ತೆರಳುವಾಗ ಕುಟುಂಬದವರು ಇದನ್ನು ಗಮನಿಸದೆ ತಂತಿ ಮೇಲೆ ಗಾಡಿಯನ್ನು ಹಾಯಿಸಿದ್ದಾರೆ. ಇದರಿಂದ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ರೇವಪ್ಪ ಅವರ ಎರಡು ಎತ್ತುಗಳೂ ಸಾವಿಗೀಡಾಗಿವೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment