ಆಹಾರ

ಬೇಸಿಗೆಯ ರುಚಿಕರ ಸೇಬಿನ ಐಸ್ ಕ್ರೀಮ್ ಮತ್ತು ಕುಲ್ಫಿ

ಈ ಬಾರಿ ಬೇಸಿಗೆಯ ತಾಪ ಹೆಚ್ಚಾಗಿದೆ. ತಂಪಾದ ಐಸ್‌ಕ್ರೀಮ್‌, ಜ್ಯೂಸ್‌, ಕುಲ್ಫಿಗಳನ್ನು ಸವಿಯಬೇಕೆಂದು ಅನಿಸುತ್ತದೆ.ರಾಸಾಯನಿಕಗಳ ಬಳಕೆ ಮಾಡದೆ ಮಕ್ಕಳಿಗೆ ದೊಡ್ಡವರಿಗೆ ಇಷ್ಟವಾಗುವ ಐಸ್‌ಕ್ರೀಮ್‌, ಜ್ಯೂಸ್‌, ಕುಲ್ಫಿಗಳನ್ನು ಮನೆಯಲ್ಲಿಯೇ ಮಾಡಿ ಸವಿಯೋಣ.

ಬೇಬೇಕಾಗುವ ವಸ್ತುಗಳು: 2 ಸೇಬು, 4 ಚಮಚ ಸಕ್ಕರೆ ಪುಡಿ, 4 ಕಪ್ ಕಂಡೆನ್ಸ್ಡ್ ಹಾಲು, 2 ಕಪ್ ಹಾಲು.

ಮಾಡುವ ವಿಧಾನ: ಸೇಬು ಹಣ್ಣನ್ನು ತೊಳೆದು, ಸಿಪ್ಪೆ ತೆಗೆದು, ಸಣ್ಣಗೆ ತುಂಡು ಮಾಡಿ. ಅದಕ್ಕೆ ಸಕ್ಕರೆ ಸೇರಿಸಿ ಮಿಶ್ರಣ ತಯಾರಿಸಿ. ಅದನ್ನು 1 ಗಂಟೆ ಫ್ರಿಜರಿನಲ್ಲಿಡಿ. ಬಳಿಕ ಹೊರ ತೆಗೆದು ಮತ್ತೆ ರುಬ್ಬಿದರೆ ಮಿಶ್ರಣ ಮೃದುವಗುತ್ತದೆ. ನಂತರ 4 ಗಂಟೆ ಫ್ರಿಜರಿನಲ್ಲಿಟ್ಟು ಬಳಿಕ ಹೊರ ತೆಗೆದರೆ ರುಚಿಯಾದ ಪೌಷ್ಟೀಕ ಸೇಬಿನ ಐಸ್ ಕ್ರೀಮ್ ಸವಿಯಲು ಸಿದ್ಧ.

ಕುಲ್ಫಿ ಬೇಕಾಗುವ ವಸ್ತುಗಳು: 1 ಲೀಟರ್ ಹಾಲು, 3-4 ಚಮಚ ಹಾಲಿನ ಪುಡಿ, 2 ಏಲಕ್ಕಿ, ಸ್ವಲ್ಪ ಬಾದಾಮಿ, 1 ಚಮಚ ಸೋಂಪು, 1 ಚಮಚ ಗುಲ್ಕನ್, 2 ಚಮಚ ಸಕ್ಕರೆ, 1 ಚಮಚ ಪಿಸ್ತಾ ಚೂರುಗಳು.

ಮಾಡುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ಹಾಲು ಹಾಕಿ ಕುದಿಸಿ. ಳಿ ಲೀಟರ್ ಪ್ರಮಾಣಕ್ಕೆ ಹಾಲು ಬಂದಾಗ ಹಾಲಿನ ಪುಡಿ, ಸಕ್ಕರೆ, ಏಲಕ್ಕಿ, ಸೋಂಪು, ಬಾದಾಮಿ, ಪಿಸ್ತಾ ಚೂರು ಹಾಕಿ ಕೆಳಗಿಳಿಸಿ. ಹಾಲು ತಣ್ಣಗಾದ ಮೇಲೆ ಗುಲಕನ್, ನಂತರ ಕುಲ್ಫಿ ಮೋಲ್ಡ್ ಯಾ ಗ್ಲಾಸಿಗೆ ಹಾಕಿ ಫ್ರೀಜರ್ ನಲ್ಲಿಡಿ. 2 ಗಂಟೆ ನಂತರ ಐಸ್ ಕ್ರೀಮ್ ಕಡ್ಡಿ ಚುಚ್ಚಿ 6-8 ಗಂಟೆ ಫ್ರಿಜರ್ ನಲ್ಲಿಟ್ಟು ತೆಗೆದರೆ ರುಚಿಯಾದ  ಕುಲ್ಫಿ ಸವಿಯಲು ಸಿದ್ಧ.

About the author

ಕನ್ನಡ ಟುಡೆ

Leave a Comment