ಸುದ್ದಿ

ಬೇಸಿಗೆ ಶಿಬಿರದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಮಜ್ಜಿಗೆ ಪೂರೈಕೆ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸುವ ಬೇಸಿಗೆ ಶಿಬಿರದಲ್ಲಿ ಭಾಗವಹಿಸುವ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ನಡೆಸುತ್ತಿರುವ ಮಕ್ಕಳಿಗೆ ಈ ವರ್ಷ ಮಜ್ಜಿಗೆ ನೀಡಲಾಗುತ್ತಿದೆ. ಬೇಸಿಗೆ ಶಿಬಿರದ ಎರಡನೇ ಆವೃತ್ತಿ ‘ಸ್ವಲ್ಪ ಓದು-ಸ್ವಲ್ಪ ಮೋಜು” ಕಾರ್ಯಕ್ರಮವನ್ನು 5 ಮತ್ತು 6ನೇ ತರಗತಿ ತೇರ್ಗಡೆ ಹೊಂದಿದ ಮಕ್ಕಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಆಯೋಜಿಸಲಾಗುತ್ತಿದೆ.

ರಾಜ್ಯಾದ್ಯಂತ 7,050 ಸರ್ಕಾರಿ ಶಾಲೆಗಳನ್ನು ಬೇಸಿಗೆ ಶಿಬಿರಗಳಿಗೆ ಗುರುತಿಸಲಾಗಿದ್ದು ಪ್ರೌಢಶಾಲೆ ತರಗತಿಗಳಿಗೆ ಕಾಲಿಡುವ ಮುನ್ನ ಮಕ್ಕಳ ಮೂಲಜ್ಞಾನವನ್ನು ಸುಧಾರಿಸಲು ಈ ರೀತಿಯ ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ.ಈ ಬೇಸಿಗೆ ಶಿಬಿರಕ್ಕೆ ಆಯ್ಕೆ ಮಾಡಿಕೊಂಡಿರುವ ಬಹುತೇಕ ಶಾಲೆಗಳು ಬರಗಾಲಪೀಡಿತ ತಾಲ್ಲೂಕುಗಳಲ್ಲಿವೆ.

ಬೇಸಿಗೆಯಲ್ಲಿ ಹೆಚ್ಚಾಗುವ ತಾಪಮಾನ ಮಕ್ಕಳಿಗೆ ಬಿಸಿಯೂಟ ಮಾತ್ರವಲ್ಲದೆ ಮಧ್ಯಾಹ್ನದ ನಂತರ ಮಜ್ಜಿಗೆ ಒದಗಿಸಲಿದ್ದೇವೆ. ಮಜ್ಜಿಗೆ ಪೂರೈಸಲು ನಾವು ಕರ್ನಾಟಕ ಹಾಲು ಒಕ್ಕೂಟದ ಜೊತೆ ಮಾತುಕತೆ ನಡೆಸುತ್ತಿದ್ದೇವೆ.

ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವುದು ಕೂಡ ಮುಖ್ಯವಾಗಿರುತ್ತದೆ ಎನ್ನುತ್ತಾರೆ ಸಚಿವ ಸೇಠ್.ಸ್ವಲ್ಪ ಓದು-ಸ್ವಲ್ಪ ಮೋಜು 5 ವಾರಗಳ ಉಚಿತ ಬೇಸಿಗೆ ಶಿಬಿರವಾಗಿದ್ದು ಮಕ್ಕಳ ಕೌಶಲ್ಯ, ಗಣಿತ ಮತ್ತು ವಿಜ್ಞಾನ ವಿಷಯಗಳ ಕೌಶಲ್ಯಗಳನ್ನು ಸುಧಾರಿಸುವುದಾಗಿದೆ ಎಂದು ಹೇಳುತ್ತಾರೆ ತನ್ವೀರ್ ಸೇಠ್ ಪ್ರಾಥಮಿಕ ಫ್ರೌಢಶಾಲಾ ಸಚಿವರು.

 

About the author

ಕನ್ನಡ ಟುಡೆ

Leave a Comment