ರಾಜ್ಯ ಸುದ್ದಿ

ಬೈಕ್​ಗೆ ಖಾಸಗಿ ಬಸ್​ ಡಿಕ್ಕಿ: ಬೈಕ್​ ಸವಾರ ಸಜೀವ ದಹನ

ಕೋಲಾರ: ಬೈಕ್​ಗೆ ಖಾಸಗಿ ಬಸ್​ ಡಿಕ್ಕಿಯಾಗಿ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆದರೆ ಆತ ಮೃತಪಟ್ಟ ರೀತಿ ಮಾತ್ರ ಭೀಕರವಾಗಿದೆ.

ಬಂಗಾರಪೇಟೆಯ ಹೊರವಲಯದಲ್ಲಿ ಖಾಸಗಿ ಬಸ್​ ಬೈಕ್​ಗೆ ಡಿಕ್ಕಿಯಾಗಿದೆ. ಅಪಘಾತದ ಬಳಿಕ ಬೈಕ್​ಗೆ ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿಯಲ್ಲಿ ಸವಾರ ನೀರಜ್​ (20) ಸಜೀವ ದಹನಗೊಂಡಿದ್ದಾನೆ. ಸುಟ್ಟು ಕರಕಲಾದ ಆತನ ದೇಹವನ್ನು ನೋಡಿ ಸ್ಥಳೀಯರು ಭಯಭೀತರಾಗಿದ್ದಾರೆ. ಈ ಬೈಕ್​ನಲ್ಲಿ ಇನ್ನೊಬ್ಬನಿದ್ದ. ಆತ ಪ್ರಾಣಾಪಾಯದಿಂದ ಪರಾರಿಯಾಗಿದ್ದಾನೆ. ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಯಮಹಾ ಬೈಕ್​ ಸಂಪೂರ್ಣ ಸುಟ್ಟುಹೋಗಿದೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

About the author

ಕನ್ನಡ ಟುಡೆ

Leave a Comment