ರಾಷ್ಟ್ರ ಸುದ್ದಿ

ಬ್ಯಾಲಟ್ ಪೇಪರ್ ಯುಗಕ್ಕೆ ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ: ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರ

ನವದೆಹಲಿ: 2019 ರ  ಲೋಕಸಭಾ ಚುನಾವಣೆಯನ್ನು ಬ್ಯಾಲೆಟ್ ಪೇಪರ್ ನಲ್ಲಿಯೇ ನಡೆಸಬೇಕೆಂಬ ರಾಜಕೀಯ ಪಕ್ಷಗಳ ಒತ್ತಡದ ನಡುವೆಯೇ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಆರೋರಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಪುನಃ ಬ್ಯಾಲೆಟ್ ಪೇಪರ್ ಗಳಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಮುಖ್ಯ ಚುನಾವಣಾ ಆಯುಕ್ತರು, ಬ್ಯಾಲೆಟ್ ಪೇಪರ್ ಯುಗಕ್ಕೆ ವಾಪಸ್ ಹೋಗುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. “ಚುನಾವಣಾ ಆಯೋಗ ಇವಿಎಂ ಹಾಗೂ ವಿವಿಪ್ಯಾಟ್ ಗಳ ಬಳಕೆಯನ್ನು ಮುಂದುವರೆಸಲಿದೆ, ಯಾವುದೇ ರಾಜಕೀಯ ಪಕ್ಷ ಹಾಗೂ ಸಂಬಂಧಪಟ್ಟವರಿಂದ ಟೀಕೆ ಹಾಗೂ ಪ್ರತಿಕ್ರಿಯೆಗಳಿಗೆ ನಾವು ಮುಕ್ತವಾಗಿದ್ದೇವೆ ಎಂದು ಸುನಿಲ್ ಅರೋರಾ ಹೇಳಿದ್ದಾರೆ.. ಅಮೆರಿಕ ಮೂಲದ ಭಾರತೀಯ ಸೈಬರ್ ತಜ್ಞ 2014 ರ ಲೋಕಸಭಾ ಚುನಾವಣೆ ವೇಳೆ ಮತಯಂತ್ರ ತಿರುಚಲಾಗಿತ್ತು ಎಂಬ ಮಾಹಿತಿ ಬಹಿರಂಗಪಡಿಸಿದ ಬೆನ್ನಲ್ಲೇ 2019 ರ ಲೋಕಸಭಾ ಚುನಾವಣೆಯನ್ನು ಬ್ಯಾಲಟ್ ಪೇಪರ್ ನಲ್ಲಿ ನಡೆಸಲು ಬಿಎಸ್ ಪಿ, ಎಸ್ ಪಿ, ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಆಗ್ರಹಿಸಿದ್ದವು.

About the author

ಕನ್ನಡ ಟುಡೆ

Leave a Comment