ರಾಷ್ಟ್ರ ಸುದ್ದಿ

ಬ್ರಾಂಡ್ ಮೋದಿ ಜನಪ್ರಿಯ, ಆದರೆ ಪಕ್ಷ, ಸರ್ಕಾರದ ಯೋಜನೆಗಳಲ್ಲಿ ವೈಫಲ್ಯ; ಸಮೀಕ್ಷೆಯಲ್ಲಿ ಬಹಿರಂಗ

ನವದೆಹಲಿ: ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗ ಬ್ರಾಂಡ್ ಮೋದಿ ಪದ ಹೆಚ್ಚು ಕೇಳಿಬರುತ್ತಿದೆ. ಆದರೆ 2014ರಲ್ಲಿ ಇದ್ದಂತೆ ಈಗ ಬಿಜೆಪಿ ಪಕ್ಷಕ್ಕೆ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಮತ್ತು ಪ್ರಗತಿ ಕಂಡುಬಂದಿಲ್ಲ.

ಇದು ಬಿಜೆಪಿಯ ಆಂತರಿಕ ಸಮೀಕ್ಷೆಯಿಂದಲೇ ತಿಳಿದುಬಂದಿದೆ. ಇತ್ತೀಚೆಗೆ ದೆಹಲಿಯಲ್ಲಿ ಸುಮಾರು 34 ಸಾವಿರ ಮಂದಿಯಲ್ಲಿ ಮಾದರಿಯ ಸಮೀಕ್ಷೆಯನ್ನು ಸುಮಾರು 4 ತಿಂಗಳ ಕಾಲ ನಡೆಸಲಾಗಿತ್ತು. ಬಿಜೆಪಿಯ ಸಾಂಪ್ರದಾಯಿಕ ಮತದಾರರ ಗುಂಪಿನಲ್ಲಿ ಈಗಲೂ ಮೋದಿಯನ್ನು ಹೊಗಳುವವರು ಇದ್ದಾರೆ. ಆದರೆ ಸರಾಸರಿ ಶೇಕಡಾ 50ಕ್ಕಿಂತ ಹೆಚ್ಚು ಬೆಂಬಲಿಗರು ಇರುತ್ತಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಕಿಕೊಂಡ ಗುರಿಯ ಮಟ್ಟಕ್ಕೆ ಬೆಂಬಲ ಸಿಕ್ಕಿಲ್ಲ.

ಕಳೆದ ಜುಲೈಯಿಂದ ಅಕ್ಟೋಬರ್ ವರೆಗೆ ನಡೆಸಲಾದ ಸಮೀಕ್ಷೆಯಲ್ಲಿ 2014ರಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕೆಂದು ಶೇಕಡಾ 59 ಮಂದಿ ಮತ ಹಾಕಿದ್ದರೆ, ಮುಂದಿನ ವರ್ಷ ಅವರು ಪ್ರಧಾನಿಯಾಗಬೇಕೆಂದು ಶೇಕಡಾ 63ರಷ್ಟು ಜನ ಒಲವು ತೋರಿಸಿದ್ದಾರೆ. ಈ ಪ್ರಮಾಣ ಜಾಸ್ತಿಯಾಗಿದ್ದರೂ ಕೂಡ ಕೇಂದ್ರ ಸರ್ಕಾರದ ಕೆಲವು ಯೋಜನೆಗಳು ವಿಫಲವಾಗಿವೆ. ಸಮೀಕ್ಷೆಗೊಳಪಟ್ಟ ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಮತ ಹಾಕಲು ಪ್ರಧಾನ ಮಂತ್ರಿ ಅಭ್ಯರ್ಥಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರೆ ಕಾಲು ಭಾಗದಷ್ಟು ಮಂದಿ ಪಕ್ಷವನ್ನು ಆಧಾರವಾಗಿಟ್ಟುಕೊಂಡು ಮತ ಹಾಕುತ್ತೇವೆ ಎನ್ನುತ್ತಾರೆ.

About the author

ಕನ್ನಡ ಟುಡೆ

Leave a Comment