ರಾಜಕೀಯ

ಬ್ರಾಹ್ಮಣರಿಗೂ ಪ್ರತ್ಯೇಕ ಧರ್ಮವಾದರೆ ತಪ್ಪಿಲ್ಲ: ಎಂ.ಬಿ.ಪಾಟೀಲ್

ಲಿಂಗಾಯತ ಸಮಾಜವನ್ನು ಸನಾತನ ಧರ್ಮದಿಂದ ಬೇರ್ಪಡಿಸಿದ ನಂತರ ಬ್ರಾಹ್ಮಣರಿಗೂ ಪ್ರತೇಕ ಧರ್ಮ ಕೊಟ್ಟರೆ ತಪ್ಪಿಲ್ಲ. ಆದರೆ ಅವರು ಹಿಂದೂ ಧರ್ಮದಿಂದ ಹೇಗೆ ಭಿನ್ನ ಎಂಬುದನ್ನು ಸಾಬೀತುಪಡಿಸಬೇಕಾಗುತ್ತದೆ ಅಂತರ್ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮ ಮಾಡಲು ಸಲಹೆ ನೀಡಿರುವ ನೀರಾವರಿ ಸಚಿವರು ಬ್ರಾಹ್ಮಣರು ಸರ್ಕಾರಕ್ಕೆ ದಾಖಲಾತಿ ಸಲ್ಲಿಸಿ ತಾವು ಹಿಂದೂಗಳಿಗಿಂತ ಭಿನ್ನ ಅಂತ ಸಾಬೀತುಪಡಿಸಲಿ.

ಒಂದು ವೇಳೆ ಸಾಬೀತುಪಡಿಸಿದ್ರೆ ಬ್ರಾಹ್ಮಣರಿಗೆ ಪ್ರತ್ಯೇಕ ಧರ್ಮ ಕೊಡೋದ್ರಲ್ಲಿ ತಪ್ಪೇನಿಲ್ಲ. ನಾವು ಲಿಂಗಾಯತರು ಪ್ರತ್ಯೇಕ ಅಂತಾ ಸಾಬೀತು ಮಾಡಿದ್ದೇವೆ. ಕೇಂದ್ರ ಸರ್ಕಾರ ಶೇ.99 ರಷ್ಟು ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ ಸೂಚಿಸುತ್ತದೆ ಎಂಬ ನಂಬಿಕೆಯನ್ನು ಹೊಂದಿದ್ದೇವೆ. ಒಂದು ವೇಳೆ ಕೇಂದ್ರ ಸರ್ಕಾರ ಆರ್‍‌.ಎಸ್‍.ಎಸ್ ಹಾಗು ಇತರರ ಒತ್ತಡಗಳಿಂದ ಲಿಂಗಾಯತ ಪ್ರತೇಕ ಧರ್ಮಕ್ಕೆ ಒಪ್ಪಿಗೆ ನೀಡದೇ ಹೋದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ. ಜೈನರು ಸಹ ಸುಪ್ರೀಂ ಕೋರ್ಟ್ ಗೆ ತೆರಳಿ ತಮ್ಮದು ಪ್ರತ್ಯೇಕ ಧರ್ಮ ಅಂತಾ ತೆಗೆದುಕೊಂಡಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment