ದೇಶ ವಿದೇಶ ರಾಷ್ಟ್ರ

ಬ್ರಿಟನ್ ಪ್ರವಾಸ ಮುಗಿಸಿ ಭಾರತಕ್ಕೆ ತೆರಳಿದ ಪ್ರಧಾನಿ

ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಇಂದು ಮುಂಜಾನೆ ರಾಜಧಾನಿ ದೆಹಲಿಗೆ ಬಂದಿಳಿದಿದ್ದಾರೆ. ಬ್ರಿಟನ್‌ನಲ್ಲಿ ಪ್ರಧಾನಿ ಕಾಮನ್‌ವೆಲ್ತ್‌ ದೇಶಗಳ ಮುಖ್ಯಸ್ಥರ ಸಭೆಯಲ್ಲಿ ಹಾಗೂ ಸರಣಿ ದ್ವೀಪಕ್ಷೀಯ ಮಾತುಕತೆಗಳಲ್ಲಿ ಭಾಗವಹಿಸಿದ್ದರು.ಕಾಮನ್‌ವೆಲ್ತ್‌‌‌‌ ಸಭೆಯ ಬಳಿಕ ಜರ್ಮನ್‌ಗೆ ಆಗಮಿಸಿದ್ದ ಮೋದಿ ಚಾನ್ಸಲರ್‌‌‌ ಏಂಜೆಲಾ ಮಾರ್ಕೆಲ್‌ರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಉಭಯ ರಾಷ್ಟ್ರಗಳ ನಡುವಿನ ಸಂಬಂಧ ವೃದ್ಧಿ, ಆರ್ಥಿಕತೆ ಬೆಳವಣಿಗೆ ಬಗ್ಗೆ ಮೋದಿ ಹಾಗೂ ಮಾರ್ಕೆಲ್‌ ಚರ್ಚಿಸಿದರು ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್‌ಕುಮಾರ್‌ ತಿಳಿಸಿದರು. ಮೋದಿ ಜರ್ಮನ್‌ನ ಅಗ್ರ ಉದ್ಯಮಿಗಳನ್ನು ಇದೇ ಸಂದರ್ಭದಲ್ಲಿ ಭೇಟಿಯಾದರು. ಏ.17ರಂದು ವಿದೇಶ ಪ್ರವಾಸ ಕೈಗೊಂಡಿದ್ದ ಮೋದಿ ಸ್ವೀಡನ್‌, ಲಂಡನ್‌ ಹಾಗು ಜರ್ಮನ್‌ ದೇಶಗಳಿಗೆ ಭೇಟಿ ನೀಡಿ ಇಂದು ಭಾರತಕ್ಕೆ ಮರಳಿದ್ದಾರೆ.

About the author

ಕನ್ನಡ ಟುಡೆ

Leave a Comment