ತಂತ್ರಜ್ಞಾನ ಪರಿಸರ

ಬ್ರಿಟನ್ ವಿಜ್ಞಾನಿಗಳಿಂದ ಪ್ಲಾಸ್ಟಿಕ್ ತಿನ್ನುವ ಕಿಣ್ವ ಸೃಷ್ಟಿ

ಮನುಷ್ಯನ ಜೀವನದ ಅವಿಭಾಜ್ಯ ಅಂಗವೆಂಬಂತಾಗಿರುವ ಪ್ಲಾಸ್ಟಿಕ್, ಈಗ ಪರಿಸರ ವಿಜ್ಞಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಪ್ಲಾಸ್ಟಿಕ್ ಅನ್ನು ತಿಂದುಮುಗಿಸುವ ಹೊಸಕಿಣ್ವಗಳನ್ನು ಇಂಗ್ಲೆಂಡ್‌ನ ಹ್ಯಾಂಪ್ಶೈರ್ ಜಿಲ್ಲೆಯ ವೊರ್ಟ್ಸಮೌತ್ ವಿದ್ಯಾಲಯದ ವಿಜ್ಞಾನಿಗಳು ಸೃಷ್ಟಿಸಿದ್ದು, ಪರಿಸರ ಸ್ವಾಸ್ಥ್ಯವಿಚಾರದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದ್ದಾರೆ.

ಹೊಸ ಕಿಣ್ವ ಯಾವುದು?:

ಇವು ಜೈವಿಕ ವೇಗವರ್ಧಕ (ಬಯೋಲಾಜಿಕಲ್ ಕೆಟಾಲಿಸ್ಟ್) ಮಾದರಿಯ ಕಿಣ್ವಗಳೆಂದು ಹೇಳಲಾಗಿದೆ. ಇವು, ಎಲ್ಲಾ ಬಗೆಯ ಪ್ಲಾಸ್ಟಿಕ್ ತಿನ್ನಬಲ್ಲ , ಪ್ಲಾಸ್ಟಿಕ್ ಕಣಗಳ ನಡುವಿನ ರಾಸಾಯನಿಕ ಬಾಂಡಿಂಗ್ ಗಳನ್ನು ತುಂಡರಿಸಿ, ಪ್ಲಾಸ್ಟಿಕ್ ಅನ್ನು ಪುಡಿಮಾಡಿ ತಿನ್ನಬಲ್ಲವು.

ಆಕಸ್ಮಿಕ ಜನನ:

2016ರಲ್ಲಿ ಜಪಾನ್‌ನ ವಿಜ್ಞಾನಿಗಳು “ಪಾಲಿಥಿಲೀನ್ ಎಂಬ ಮಾದರಿಯ ಪ್ಲಾಸ್ಟಿಕ್ ಅನ್ನು ತಿಂದು ” ಬದುಕುವ ಬ್ಯಾಕ್ಟಿರಿಯಾಗಳನ್ನು ಸಂಶೋಧಿಸಿದ್ದರು. ಇದು ಪರಿಸರ ಸಂರಕ್ಷಣೆಯಲ್ಲೇ ಒಂದು ಆಶಾಕಿರಣ ಮೂಡಿಸಿದ ಬ್ಯಾಕ್ಟಿರಿಯಾ ಎಂದು ಹೇಳಲಾಗಿತ್ತು. ಇದೀಗ, ಇದೇ ಬ್ಯಾಕ್ಟಿರಿಯಾ ಮೇಲೆ ಸಂಶೋಧನೆ ನಡೆಸುತ್ತಿದ್ದ ಬ್ರಿಟನ್ ಹಾಗು ಅಮೆರಿಕ ವಿಜ್ಞಾನಿಗಳ ತಂಡವೊಂದು ಅಕಸ್ಮಾತ್ ಆಗಿ ಈ ಹೊಸ ಕಿಣ್ವಗಳನ್ನು ಸೃಷ್ಟಿಸಿದೆ.

About the author

ಕನ್ನಡ ಟುಡೆ

Leave a Comment