ತಂತ್ರಜ್ಞಾನ

ಬ್ಲೂ ವೇಲ್ ಗೇಮ್ ಹುಡುಕಾಟದಲ್ಲಿ ಮೈಸೂರು ರಾಜ್ಯದಲ್ಲೇ ಪ್ರಥಮ ಸ್ಥಾನ

ಮೈಸೂರು; ಡೆಡ್ಲಿ ಗೇಮ್ ಬ್ಲೂ ವೆಲ್ ಗೇಮ್ ಈಗ ಭಾರತದಲ್ಲಿ ಹಲವು ಬಲಿ ಪಡೆದುಕೊಂಡಿದೆ, ಪಡೆಯುತ್ತಲಿದೆ. ಈಗ ಕರ್ನಾಟಕದಲ್ಲೂ ಬಲೆ ಪಡೆಯಲು ಪ್ರಾರಂಭಿಸಿದೆ. ಡೆಡ್ಲಿ ಗೇಮ್ ಎಂದು ಗೊತ್ತಿದ್ದರೂ ಜನ ಅದರೆಡೆಗೆ ಆಕರ್ಷಿತರಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಗೇಮ್ ನ್ನು ಹುಡುಕಾಡುವುದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ರಾಜ್ಯದಲ್ಲೇ ಪ್ರಥಮ ಸ್ತಾನದಲ್ಲಿರುವುದು ಆಘಾತಕಾರಿ ವಿಷಯವಾಗಿದೆ.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತ ಷಿಕ್ಷಣ ಇಲಾಖೆ ನಗರ ಹಾಗು ಜಿಲ್ಲೆಯಾದ್ಯಂತ 3387 ಶಾಲೆಗಳಲ್ಲಿ ಬ್ಲೂವೇಲ್ ಗೇಮ್ ಬಗ್ಗೆ ಜಾಗೃತಿ ಮೂಡಿಸಲು ಸುತ್ತೋಲೆ ಹೊರಡಿಸಿದೆ. ಇಲಾಖೆಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಾದ ಡಾ.ಬಿ.ಕೆ.ಎಸ್.ವರ್ಧನ್ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಕುರಿತು ಸುತ್ತೋಲೆ ಕಳುಹಿಸಿದ್ದಾರೆ.
ಶಾಲೆಯ ಮುಖ್ಯಸ್ತರು ಪ್ರಾರ್ಥನಾ ಸಂದರ್ಭದಲ್ಲಿ ಈ ಗೇಮ್ ನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವಂತೆ ಆದೇಶಿಸಿದ್ದಾರೆ.

ಬ್ಲೂ ವೇಲ್ ಗೇಮ್ ಗಾಗಿ ಹುಡುಕಾಟ ನಡೆಸಿದ ದೇಶಗಳ ಪೈಕಿ ಭಾರತ 9ನೇ ಸ್ತಾನದಲ್ಲಿದ್ದು , ಅದರಲ್ಲಿ ಮೈಸೂರು ರಾಜ್ಯದಲ್ಲಿ ಮೊದಲ ಸ್ತಾನದಲ್ಲಿರುವುದು ಆತಂಕಕಾರಿ ವಿಷಯವಾಗಿದೆ ಕಳೆದ ಮೂರು ತಿಂಗಳಿನಿಂದ ಮೈಸೂರಿನಲ್ಲಿ ಹುಡುಕಾಟ ಹೆಚ್ಚಾಗಿರುವುದು ತಿಳಿದುಬಂದಿದೆ.

ಮೈಸೂರಿನ ಸ್ತಾನದ ನಂತರದ ಸ್ತಾನದಲ್ಲಿ ಬೆಂಗಳೂರು ಇಡಿ ದೇಶದಲ್ಲೇ 23 ನೇ ಸ್ತಾನದಲ್ಲಿದೆ. ತಮ್ಮ ಮಕ್ಕಳ ಬಗ್ಗೆ ಎಚ್ಚರವಹಿಸಬೇಕು ಒಂದು ವೇಳೆ ನಿಮ್ಮ ಮಕ್ಕಳು ಈ ಗೇಮ್ ಆಡುತ್ತಿರುವ ಬಗ್ಗೆ ಅನುಮಾನ ಕಂಡುಮಂದಲ್ಲಿ ಮಕ್ಕಳ ಸಹಾಯವಾಣಿ 1098 ಗೆ ಸಂಪರ್ಕಿಸಿ ನೆರವು ಪಡೆದುಕೊಳ್ಳಬಹುದು ಎಂದು ಡಿಡಿಪಿಐ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment