ರಾಷ್ಟ್ರ ಸುದ್ದಿ

ಭಕ್ತರೇ ರಾಮಮಂದಿರ ನಿರ್ಮಿಸಲಿ: ಕಾಂಗ್ರೆಸ್‌ ನಾಯಕ ಕೃಪಾಶಂಕರ್ ಸಿಂಗ್

ಮುಂಬಯಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಶಿವ ಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ಮುಂಬಯಿ ಕಾಂಗ್ರೆಸ್ ಅಧ್ಯಕ್ಷ ಕೃಪಾಶಂಕರ್ ಸಿಂಗ್ ಕೂಡ ಅಯೋಧ್ಯೆಯಲ್ಲಿ ಶೀಘ್ರದಲ್ಲೇ ರಾಮಮಂದಿರ ನಿರ್ಮಾಣವಾಗಲಿ ಎಂದು ಹೇಳಿದ್ದಾರೆ.

ಭಾಗವತ್ ಮತ್ತು ಠಾಕ್ರೆ ಅವರ ರಾಮಮಂದಿರ ಕುರಿತಾದ ಹೇಳಿಕೆಗಳನ್ನು ಗಮನಿಸಿದ್ದೇನೆ. ಆರ್‌ಎಸ್‌ಎಸ್ ಆಗಲೀ, ಇತರ ಯಾವುದೇ ರಾಜಕೀಯ ಪಕ್ಷವಾಗಲೀ ಮಂದಿರ ನಿರ್ಮಾಣ ಮಾಡುವ ಯೋಜನೆಯಲ್ಲಿಲ್ಲ. ರಾಜಕಾರಣಿಗಳು ಮಂದಿರ ನಿರ್ಮಾಣದ ಕುರಿತು ಚುನಾವಣೆಯ ಹೊಸ್ತಿಲಲ್ಲಿ ಮಾತ್ರ ಮಾತನಾಡುತ್ತಾರೆ. ಹೀಗಿರುವಾಗ ಮಂದಿರ ನಿರ್ಮಾಣಕ್ಕಾಗಿ ಅವರನ್ನು ಕಾಯುವುದು ಬಿಟ್ಟು, ಭಕ್ತರೇ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕೃಪಾಶಂಕರ್ ತಿಳಿಸಿದ್ದಾರೆ. ರಾಮ ಮಂದಿರ ಟ್ರಸ್ಟ್‌ ಮಂದಿರ ನಿರ್ಮಾಣದ ಮುಂದಾಳತ್ವ ವಹಿಸಬೇಕು, ಭಕ್ತರೇ ಮಂದಿರ ನಿರ್ಮಾಣಕ್ಕೆ ಮುಂದಾಗಬೇಕು. ಅದರಿಂದ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಗೆ ಕಾಯುವುದು ತಪ್ಪುತ್ತದೆ. ಮಂದಿರ ನಿರ್ಮಾಣಕ್ಕೆ ಕಾಲಮಿತಿ ಕೂಡ ನಿಗದಿಪಡಿಸುವುದು ಉತ್ತಮ ಎಂದು ಕೃಪಾಶಂಕರ್ ಅಭಿಪ್ರಾಯಪಟ್ಟಿದ್ದಾರೆ.

About the author

ಕನ್ನಡ ಟುಡೆ

Leave a Comment