ರಾಷ್ಟ್ರ ಸುದ್ದಿ

ಭಯೋತ್ಪಾದನೆ ಮಟ್ಟಹಾಕಲು ಮನಮೋಹನ್‌ ಸಿಂಗ್ ಅಗತ್ಯ ಕ್ರಮ ಕೈಗೊಂಡಿರಲಿಲ್ಲ: ಶೀಲಾ ದೀಕ್ಷಿತ್

ನವದೆಹಲಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪ್ರಧಾನಿ ಮೋದಿ ಕೈಗೊಂಡ ದಿಟ್ಟ ಕ್ರಮಗಳನ್ನು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಕೈಗೊಂಡಿರಲಿಲ್ಲ ಎಂದು ದೆಹಲಿ ಕಾಂಗ್ರೆಸ್ ಮುಖ್ಯಸ್ಥೆ ಶೀಲಾ ದೀಕ್ಷಿತ್ ಹೇಳಿಕೊಂಡಿದ್ದಾರೆ. 26 / 11 ಮುಂಬಯಿ ದಾಳಿಯ ಬಳಿಕ ಭಯೋತ್ಪಾದನೆ ಬಗ್ಗೆ ವ್ಯವಹರಿಸುವಾಗ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಈಗಿನ ಪ್ರಧಾನಿಯಷ್ಟು ಬಲವಾದ ಹಾಗೂ ನಿರ್ಧಾರಯುತವಾದ ಹೋರಾಟ ಮಾಡಲಿಲ್ಲ, ದಿಟ್ಟ ಕ್ರಮ ಕೈಗೊಂಡಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಬೇಕು ಎಂದು ಶೀಲಾ ದೀಕ್ಷಿತ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ಶೀಲಾ ದೀಕ್ಷಿತ್ ಹೇಳಿಕೆಗೆ ಬಿಜೆಪಿ  ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಧನ್ಯವಾದ ಹೇಳಿದ್ದಾರೆ. ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದವರು ನೀಡಿರುವ ಹೇಳಿಕೆ ಬಗ್ಗೆ ಶಾ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಂಬಂದ ಟ್ವೀಟ್ ಮಾಡಿರುವ ಶೀಲಾ ದೀಕ್ಷಿತ್, ಥ್ಯಾಂಕ್ಯೂ ಶೀಲಾ ಜೀ, ಈಗಾಗಲೇ ದೇಶದ ಜನರಿಗೆ ಇದರ ಬಗ್ಗೆ ತಿಳಿದಿದೆ, ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಇದನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅಮಿತ್ ಶಾ ಟ್ವಿಟ್ಟರ್ ನಲ್ಲಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment