ಕ್ರೀಡೆ

ಭಾರತಕ್ಕೆ ಮತ್ತೆ ಸೋಲು

ಮುಂಬೈ: ಭಾರತ ಮಹಿಳಾ ತಂಡ ಟಿ20 ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ 36 ರನ್​ಗಳಿಂದ ಪರಾಭವಗೊಂಡಿದೆ. ಹರ್ವನ್​ಪ್ರೀತ್ ಕೌರ್ ಪಡೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದು ಫೈನಲ್​ಗೇರುವ ಕನಸು ಭಗ್ನಗೊಂಡಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಆಸ್ಟ್ರೇಲಿಯಾವನ್ನು ಬ್ಯಾಟಿಂಗ್ ಗೆ ಇಳಿಸಿತು. ಆಕರ್ಷಕ ಅರ್ಧಶತಕದ ನೆರವಿನಿಂದ ಆಸೀಸ್ 5 ವಿಕೆಟ್​ಗೆ 186 ರನ್ ದಾಖಲಿಸಿತು. ಪ್ರತಿಯಾಗಿ ಭಾರತ ತಂಡ ನಿಧಾನಗತಿಯ ಬ್ಯಾಟಿಂಗ್ ಹಿನ್ನಡೆ ಹಾಗೂ ಮೇಗನ್ ಶಟ್(31ಕ್ಕೆ 3) ಹ್ಯಾಟ್ರಿಕ್ ದಾಳಿಗೆ 5 ವಿಕೆಟ್​ಗೆ 150 ರನ್ ಪೇರಿಸಿ ಸೋಲೊಪ್ಪಿಕೊಂಡಿತು. ರೋಡ್ರಿಗಸ್ ಶ್ರಮ ವ್ಯರ್ಥ  ಭಾರತ ಪರ ಯುವ ಆರಂಭಿಕ ಆಟಗಾರ್ತಿ ಜೆಮಿಮಾ ರೋಡ್ರಿಗಸ್ (50 ರನ್, 41 ಎಸೆತ, 8 ಬೌಂಡರಿ) ಅರ್ಧಶತಕದ ಪ್ರತಿರೋಧ ತೋರಿದರೆ ಉಳಿದೆಲ್ಲಾ ಬ್ಯಾಟ್ಸ್​ವುಮೆನ್​ಗಳು ವೈಫಲ್ಯ ಕಂಡರು.

ಭಾರತ ತನ್ನ ಕೊನೇ ಔಪಚಾರಿಕ ಲೀಗ್ ಪಂದ್ಯದಲ್ಲಿ ಮಾರ್ಚ್ 29ರಂದು ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. ಏಕದಿನ ಸರಣಿಗೆ ಭಾರತ ಮಹಿಳಾ ತಂಡ ಪ್ರಕಟವಾಗಿದೆ.ಏಪ್ರಿಲ್ 3ರಿಂದ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧದ 4 ಪಂದ್ಯಗಳ ಏಕದಿನ ಸರಣಿಗೆ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದೆ. ಕನ್ನಡತಿಯರಾದ ವೇದಾ ಕೃಷ್ಣಮೂರ್ತಿ ಹಾಗೂ ರಾಜೇಶ್ವರಿ ಗಾಯಕ್ವಾಡ್ ಅನುಭವಿ ಮಿಥಾಲಿ ರಾಜ್ ಸಾರಥ್ಯದ 15 ಆಟಗಾರ್ತಿಯರ ತಂಡದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

 

 

About the author

ಕನ್ನಡ ಟುಡೆ

Leave a Comment