ತಂತ್ರಜ್ಞಾನ

ಭಾರತದ ಅತಿ ಭಾರದ ಜಿಸ್ಯಾಟ್- 11 ಉಪಗ್ರಹ ಉಡಾವಣೆ ಯಶಸ್ವಿ

ಬೆಂಗಳೂರು: ಭಾರತದ ಅತಿ ತೂಕದ ಮತ್ತು ಅತ್ಯಂತ ಸುಧಾರಿತ ಸಂವಹನ ಉಪಗ್ರಹ ಜಿಸ್ಯಾಟ್-11  ಬುಧವಾರ ನಸುಕಿನ ಜಾವ ಫ್ರೆಂಚ್ ನ ಗಯಾನಾದ ಉಡ್ಡಯನ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಗೊಂಡಿದೆ.ಏರಿಯೆನ್ 5 ವಿಎ-246 ಉಡ್ಡಯನ ವಾಹಕ, ಫ್ರಾನ್ಸ್ ನ ಕೌರೋ ಉಡ್ಡಯನ ಮೂಲಕೇಂದ್ರದಿಂದ ಭಾರತದ ಸ್ಥಳೀಯ ಕಾಲಮಾನ ಇಂದು ನಸುಕಿನ ಜಾವ 2 ಗಂಟೆ 7 ನಿಮಿಷಕ್ಕೆ ಉಡಾವಣೆಗೊಂಡಿದೆ.

ಇದೇ ವಾಹಕ ದಕ್ಷಿಣ ಕೊರಿಯಾದ ಜಿಇಒ-ಕೊಂಪ್ಯಾಸ್-2ಎ ಉಪಗ್ರಹವನ್ನು ಸಹ ಹೊತ್ತೊಯ್ದಿದೆ.ಭಾರತದಲ್ಲಿ ಬ್ರಾಂಡ್ ಬಾಂಡ್ ಗಳ ಸೇವೆಯನ್ನು ಹೆಚ್ಚಿಸಲು ಮತ್ತು ಮುಂದಿನ ಪೀಳಿಗೆಗೆ ಸುಧಾರಿತ ತಂತ್ರಜ್ಞಾನಗಳ ಬಳಕೆಗೆ ಈ ಉಪಗ್ರಹ ಸಹಾಯವಾಗಲಿದ್ದು, ಭಾರತೀಯ ಕಾಲಮಾನ ಬುಧವಾರ ನಸುಕಿನ ಜಾವ 2 ಗಂಟೆ 7 ನಿಮಿಷಕ್ಕೆ ದಕ್ಷಿಣ ಅಮೆರಿಕಾದ ಈಶಾನ್ಯ ಕರಾವಳಿಯಲ್ಲಿ ಉಪಗ್ರಹ ನೆಲೆನಿಂತಿದೆ. ಇದನ್ನು ಫ್ರಾನ್ಸ್ ನ ಗಯಾನಾ ಉಡ್ಡಯನ ಕೇಂದ್ರದಿಂದ ಏರಿಯನ್ 5 ವಿಎ-246 ಉಡ್ಡಯನ ವಾಹಕ ಹೊತ್ತೊಯ್ದಿತ್ತು ಎಂದು ಇಸ್ರೊ ಸಂಸ್ಥೆ ಅಧ್ಯಕ್ಷ ಕೆ ಶಿವನ್ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಭಾರತಕ್ಕೆ ಅತ್ಯಂತ ಸಂಪದ್ಭರಿತ ಉಪಗ್ರಹವಾಗಿದೆ ಎಂದು ಅವರು ಹೇಳಿದ್ದಾರೆ. 

5,854 ಕೆಜಿ ತೂಕದ ಜಿಸ್ಯಾಟ್-11 ಇಸ್ರೊ ಇದುವರೆಗೆ ನಿರ್ಮಿಸಿದ ಅತ್ಯಂತ ಭಾರತ ಉಪಗ್ರಹವಾಗಿದೆ. ಇದು 15 ವರ್ಷಕ್ಕಿಂತ ಹೆಚ್ಚು ಜೀವಿತಾವಧಿಯನ್ನು ಹೊಂದಿದೆ ಎಂದು ಇಸ್ರೊ ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.ಫ್ರಾನ್ಸ್ ಪ್ರಾಂತ್ಯದ ಕೌರೌದಲ್ಲಿರುವ ಉಡ್ಡಯನ ವಾಹಕ ಸಂಕೀರ್ಣದಿಂದ ಏರಿಯನ್-5 ವಾಹಕ ಹೊತ್ತೊಯ್ದ ಜಿಸ್ಯಾಟ್ -11 ಉಪಗ್ರಹ ಕಕ್ಷೆಯಲ್ಲಿ ಯಶಸ್ವಿಯಾಗಿ ನೆಲೆನಿಂತಿತು. ಸುಮಾರು 33 ನಿಮಿಷಗಳ ಸಾಲ ಹಾರಾಟ ನಡೆಸಿ ಏರಿಯನ್-5 ವಾಹಕದಿಂದ ಬೇರ್ಪಟ್ಟು ಅಂಡಾಕಾರದ ಭೂಸ್ಥಿರ ಕಕ್ಷೆಯಲ್ಲಿ ನೆಲೆನಿಂತಿತು. ಉಡ್ಡಯನ ವಾಹಕದಿಂದ ಉಪಗ್ರಹ ಬೇರ್ಪಟ್ಟ ನಂತರ ಕರ್ನಾಟಕದ ಹಾಸನದಲ್ಲಿರುವ ಇಸ್ರೊದ ಕೇಂದ್ರ ನಿಯಂತ್ರಣಾ ವ್ಯವಸ್ಥೆಯಲ್ಲಿ  ಜಿಸ್ಯಾಟ್ -11 ನ ನಿಯಂತ್ರಣ ಹೊಂದಿರುತ್ತದೆ. ಎಲ್ಲಾ ಕಕ್ಷೆಯ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ನಂತರ ಉಪಗ್ರಹ ಕಾರ್ಯನಿರ್ವಹಿಸಲು ಆರಂಭಿಸುತ್ತದೆ. 

ಇಂಟರ್ನೆಟ್ ಕ್ರಾಂತಿಗೆ ಸಹಕಾರಿ: ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜಿಸ್ಯಾಟ್-11  ಉಪಗ್ರಹ ಭೂಮಿಯಿಂದ 36 ಸಾವಿರ ಕಿಲೋ ಮೀಟರ್ ಎತ್ತರದ ಕಕ್ಷೆಯಲ್ಲಿ ಕಾರ್ಯನಿರ್ವಹಿಸಲಿದ್ದು  ನಾಲ್ಕು ಸೋಲಾರ್ ಪ್ಯಾನಲ್‍ಗಳನ್ನು ಹೊಂದಿದೆ. ಭಾರತದ ಗ್ರಾಮೀಣ ಹಾಗೂ ದ್ವೀಪ ಪ್ರದೇಶಗಳಲ್ಲಿ ಉತ್ತಮ ಇಂಟರ್ ನೆಟ್ ಸೇವೆ ನೀಡುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿದೆ.ದೇಶಕ್ಕೆ ಸುಮಾರು 16 ಜಿಬಿಪಿಎಸ್ ಡಾಟಾ ಸಂಪರ್ಕ ಸೇವೆಯನ್ನು ಒದಗಿಸಲಿದ್ದು ಕೇಂದ್ರ ಸರ್ಕಾರದ ಡಿಜಿಟಲ್ ಭಾರತ ಅಭಿಯಾನದಡಿ ದೇಶದ ಹಳ್ಳಿ ಹಳ್ಳಿಗಳಿಗೂ 100 ಜಿಬಿಪಿಎಸ್ ನಷ್ಟು ಅತ್ಯಧಿಕ ಡಾಟಾ ಸಂಪರ್ಕ ಸೇವೆಯನ್ನು ಒದಗಿಸುವ ಮಹಾತ್ವಾಕಾಂಕ್ಷೆಯ ಯೋಜನೆಯನ್ನು ಇದು ಈಡೇರಿಸಲಿದೆ. ಭಾರತ ಸಂಪರ್ಕ ಯೋಜನೆಯಡಿ ಗ್ರಾಮ ಪಂಚಾಯತ್ ಗಳಿಗೆ ಇಂಟರ್ನೆಟ್, ಬ್ರಾಡ್ ಬ್ಯಾಂಡ್ ಸೇವೆಯನ್ನು ಒದಗಿಸಲು ಜಿಸ್ಯಾಟ್-11 ಅಧಿಕ ಡಾಟಾ ಸಂಪರ್ಕವನ್ನು ಒದಗಿಸಲಿದೆ. ನಾಲ್ಕು ಉಪಗ್ರಹಗಳ ಪೈಕಿ ಜಿಸ್ಯಾಟ್- 19, ಜಿಸ್ಯಾಟ್ -29 ಉಪಗ್ರಹಗಳನ್ನು ಈಗಾಗಲೇ ಉಡಾವಣೆ ಮಾಡಲಾಗಿದ್ದು, ಇದೀಗ ಜಿಸ್ಯಾಟ್ -11 ಬಳಿಕ ಜಿಸ್ಯಾಟ್-20 ಮುಂದಿನ ವರ್ಷ ಉಡಾವಣೆಯಾಗಲಿದೆ.

About the author

ಕನ್ನಡ ಟುಡೆ

Leave a Comment