ಕ್ರೀಡೆ

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ – ಕಶ್ಯಪ್ ಡಿಸೆಂಬರ್ ನಲ್ಲಿ ಮದುವೆ

ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಹಾಗೂ ಪರುಪಲ್ಲಿ ಕಶ್ಯಪ್ ಡಿಸೆಂಬರ್ ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಕೆಲ ಮೂಲಗಳ ಪ್ರಕಾರ, ಸೈನಾ ನೆಹ್ವಾಲ್ ಹಾಗೂ ಕಶ್ಯಪ್ ಡಿಸೆಂಬರ್ 16ರಂದು ವಿವಾಹವಾಗುತ್ತಿದ್ದು 100 ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗುತ್ತದೆ. ನಂತರ ಡಿಸೆಂಬರ್ 21ರಂದು ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಅದಾಗಲೇ ಭಾರತದಲ್ಲಿ ಕೆಲ ಕ್ರೀಡಾ ಜೋಡಿಗಳು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸಾಲಿಗೆ ಸೈನಾ-ಕಶ್ಯಪ್ ಸಹ ಸೇರಲಿದ್ದಾರೆ.
ಇದಕ್ಕೂ ಮುಂಚೆ ಭಾರತದಲ್ಲಿ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್-ದೀಪಿಕಾ ಪಳ್ಳಿಕಲ್, ಇಶಾಂತ್ ಶರ್ಮಾ-ಪ್ರತಿಮಾ ಸಿಂಗ್, ಕುಸ್ತಿ ಪಟು ಗೀತಾ ಪೋಗಟ್-ಪವನ್ ಕುಮಾರ್ ಮತ್ತು ಸಾಕ್ಷಿ ಮಲಿಕ್-ಸತ್ಯವರ್ತ್ ಕಡಿಯಾನ್ ರನ್ನು ವಿವಾಹವಾಗಿದ್ದಾರೆ.

About the author

ಕನ್ನಡ ಟುಡೆ

Leave a Comment