ರಾಷ್ಟ್ರ ಸುದ್ದಿ

ಭಾರತದ ಗಡಿಗೆ ಕಳುಹಿಸಲು ಪಾಕ್’ನಿಂದ 600 ಯುದ್ಧ ಟ್ಯಾಂಕ್ ಖರೀದಿ: ಗುಪ್ತಚರ ಮಾಹಿತಿ

ನವದೆಹಲಿ: ಭಾರತದ ಜೊತೆಗಿನ ಗಡಿಯಲ್ಲಿ ತನ್ನ ಶಕ್ತಿ-ಸಾಮರ್ಥ್ಯವನ್ನು ವೃದ್ಧಿಸಲು ಹೆಣಗಾಡುತ್ತಿರುವ ಪಾಕಿಸ್ತಾನ, ತನ್ನ ಸೇನೆಗೆ ಬಲ ತುಂಬುವ ಉದ್ದೇಶದಿಂದ 600 ಯುದ್ಧ ಟ್ಯಾಂಕ್ ಗಳನ್ನು ಖರೀದಿಸಲು ಯೋಜನೆಯೊಂದನ್ನು ರೂಪಿಸುತ್ತಿದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿವೆ.
600 ಸಮರ ಟ್ಯಾಂಕ್ ಗಳ ಪೈಕಿ 360 ಟ್ಯಾಂಕ್ ಗಳನ್ನು ವಿದೇಶದಿಂದ ಹಾಗೂ 220 ಟ್ಯಾಂಕ್ ಗಳನ್ನು ಚೀನಾ ರಾಷ್ಟ್ರದ ನೆರವಿನೊಂದಿಗೆ ದೇಶೀಯವಾಗಿ ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಪಾಕಿಸ್ತಾನ ಹೊಂದಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ ರಷ್ಯಾದ ಟಿ-90 ಯುದ್ಧ ಟ್ಯಾಂಕ್ ಗಳನ್ನೂ ಖೀರಿದಿಸಲು ಪಾಕಿಸ್ತಾನ ಚಿಂತನೆ ನಡೆಸಿದೆ ಎಂದು ಗುಪ್ತಚರ ಸಂಸ್ಥೆಯ ಮೂಲಗಳು ತಿಳಿಸಿವೆ.
ಪಾಕಿಸ್ತಾನ ಖರೀದಿಸಲು ಉದ್ದೇಶಿಸುತ್ತಿರುವ ಟ್ಯಾಂಕ್ ಗಳನ್ನು 3-4 ಕಿ.ಮೀವರೆಗೆ ದಾಳಿ ನಡೆಸುವ ಸಾಮರ್ಥ್ಯವನ್ನು ಹೊಂದಿವೆ. ಯುದ್ಧ ಟ್ಯಾಂಕ್ ಗಳು ಮಾತ್ರವೇ ಅಲ್ಲದೆ ಇಟಲಿಯಿಂದ 245 ‘150’ ಎಂಎಂ ಎಸ್’ಪಿ ಮೈಕ್-10 ಗನ್ ಗಳನ್ನು ಖರೀಸಲು ಪಾಕಿಸ್ತಾನ ನಿರ್ಧರಿಸಿದೆ. ಆ ಪೈಕಿ ಈಗಾಗಲೇ 120 ಗನ್ ಗಳು ಹಸ್ತಾಂತರವಾಗಿವೆ ಎಂದು ಮೂಲಗಳಿಂದ ತಿಳಿದುಬಂದಿದೆ. ಭಾರತದ ಬಳಿ ಟಿ-90, ಟಿ-72 ಹಾಗೂ ಅರ್ಜುನ ಟ್ಯಾಂಕ್ ಗಳು ಇದ್ದು, ಪಾಕಿಸ್ತಾನದ ಟ್ಯಾಂಕ್ ಪಡೆಗೆ ಹೋಲಿಸಿದರೆ ಉತ್ಕೃಷ್ಟವಾಗಿವೆ. ಹೀಗಾಗಿ ಪಾಕಿಸ್ತಾನ ಟ್ಯಾಂಕ್ ಗಳ ಖರೀದಿಗೆ ಮುಂದಾಗಿದೆ ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment