ರಾಷ್ಟ್ರ ಸುದ್ದಿ

ಭಾರತದ ಬಾಹ್ಯಾಕಾಶ ಯೋಜನೆಯಲ್ಲಿ ಮಹತ್ವದ ಮೈಲಿಗಲ್ಲು: ಪ್ರಧಾನ ಮಂತ್ರಿ ನರೇಂದ್ರ ಮೋದಿ

ನವದೆಹಲಿ: ಭಾರತ ಬುಧವಾರ ಜಿಸ್ಯಾಟ್-11 ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದ್ದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಇಸ್ರೊ ಸಂಸ್ಥೆಯ ವಿಜ್ಞಾನಿಗಳನ್ನು ಶ್ಲಾಘಿಸಿರುವ ಅವರು, ಭಾರತದ ಅತಿ ಭಾರವಾದ ಸುಧಾರಿತ ಸಂವಹನ ಉಪಗ್ರಹವಾದ ಜಿಸ್ಯಾಟ್-11 ಹಳ್ಳಿ ಹಳ್ಳಿಗೂ ತಲುಪಲಿದೆ. ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಮಹತ್ವದ ಮೈಲಿಗಲ್ಲು, ಭಾರತ ತನ್ನ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತದೆ.ಸಂಶೋಧನೆ, ಸೃಜನಶೀಲತೆಯಲ್ಲಿ ತೊಡಗಿರುವ ನಮ್ಮ ವಿಜ್ಞಾನಿಗಳು ಸಾಧನೆ, ಯಶಸ್ಸಿನಲ್ಲಿ ಅತಿ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡಿರುತ್ತಾರೆ. ಅವರ ಮಹತ್ತರ ಕೆಲಸ ಮತ್ತು ಸಾಧನೆಗಳು ಪ್ರತಿ ಭಾರತೀಯರಿಗೆ ಸ್ಪೂರ್ತಿಯಾಗಿದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment