ಅ೦ತರಾಷ್ಟ್ರೀಯ

ಭಾರತದ ಮೇಲೆ 10 ಸರ್ಜಿಕಲ್ ದಾಳಿ: ಪಾಕಿಸ್ತಾನ ಎಚ್ಚರಿಕೆ

ಇಸ್ಲಾಮಾಬಾದ್‌: ಪಾಕ್‌ ಗಡಿಯೊಳಗೆ ನುಗ್ಗಿ ಭಾರತ ಒಂದು ಸರ್ಜಿಕಲ್ ದಾಳಿ ಮಾಡಿದರೆ, ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ 10 ಸರ್ಜಿಕಲ್‌ ದಾಳಿ ಮಾಡುತ್ತೇವೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ. ಲಂಡನ್‌ನಲ್ಲಿ ಸೇನಾ ಮುಖ್ಯಸ್ಥ ಜ.ಕಮರ್‌ ಜಾವೇದ್‌ ಬಾಜ್ವಾ ಅವರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನಾ ವಕ್ತಾರ ಜ.ಆಸಿಫ್‌ ಗಫೂರ್‌, ಈ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ. ‘ನಮ್ಮ ವಿರುದ್ಧ ದುಸ್ಸಾಹಸಕ್ಕೆ ಕೈ ಹಾಕುವ ಯಾರಿಗೇ ಆದರೂ, ಪಾಕಿಸ್ತಾನದ ಶಕ್ತಿ ಸಾಮರ್ಥ್ಯ‌ಗಳ ಬಗ್ಗೆ ಕಿಂಚಿತ್ತೂ ಅನುಮಾನ ಇರಬಾರದು. ಏಕೆಂದರೆ ಪಾಕಿಸ್ತಾನ ಅಂತಹ ನಡೆಗಳಿಗೆ ದಿಟ್ಟ ಉತ್ತರ ನೀಡಲಿದೆ,” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಚೀನಾ ಜತೆಗಿನ ಆರ್ಥಿಕ ಕಾರಿಡಾರ್‌ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಗಫೂರ್‌, ಇದರಿಂದ ದೇಶದ ಆರ್ಥಿಕತೆ ಬಲಗೊಳ್ಳಲಿದೆ ಎಂದಿದ್ದಾರೆ. ‘ನಮ್ಮ ವಿರುದ್ಧ ದುಸ್ಸಾಹಸಕ್ಕೆ ಕೈ ಹಾಕುವ ಯಾರಿಗೇ ಆದರೂ, ಪಾಕಿಸ್ತಾನದ ಶಕ್ತಿ ಸಾಮರ್ಥ್ಯ‌ಗಳ ಬಗ್ಗೆ ಕಿಂಚಿತ್ತೂ ಅನುಮಾನ ಇರಬಾರದು. ಏಕೆಂದರೆ ಪಾಕಿಸ್ತಾನ ಅಂತಹ ನಡೆಗಳಿಗೆ ದಿಟ್ಟ ಉತ್ತರ ನೀಡಲಿದೆ,” ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಚೀನಾ ಜತೆಗಿನ ಆರ್ಥಿಕ ಕಾರಿಡಾರ್‌ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಗಫೂರ್‌, ಇದರಿಂದ ದೇಶದ ಆರ್ಥಿಕತೆ ಬಲಗೊಳ್ಳಲಿದೆ ಎಂದಿದ್ದಾರೆ.

About the author

ಕನ್ನಡ ಟುಡೆ

Leave a Comment