ದೇಶ ವಿದೇಶ ರಾಷ್ಟ್ರ

ಭಾರತದ ಮೊದಲ ಮಹಿಳಾ ವೈದ್ಯೆಗೆ ಗೂಗಲ್‌ ಡೂಡಲ್‌‌ ಗೌರವ

ನವದೆಹಲಿ: ಭಾರತದ ಮೊದಲ ಮಹಿಳಾ ವೈದ್ಯೆಯನ್ನು ಗೂಗಲ್‌ ಡೂಡಲ್‌‌ ವಿಶೇಷವಾಗಿ ಸ್ಮರಿಸಿಕೊಂಡಿದೆ. ವೈದ್ಯೆ ಆನಂದಿಗೋಪಾಲ್‌ ಜೋಶಿ ಅವರ ಡೂಡಲ್ ಬಿಡುಗಡೆ ಮಾಡಿ ವಿಶೇಷ ಗೌರವ ಸಲ್ಲಿಸಿದೆ.

ಭಾರತದ ಮೊದಲ ಅಲೋಪತಿ ಮಹಿಳಾ ವೈದ್ಯೆಯಾಗಿ ಸೇವೆ ಸಲ್ಲಿಸಿದ್ದ ಆನಂದಿ ಅವರ 153ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಗೂಗಲ್‌ ಈ ರೀತಿಯ ವಿಶೇಷ ಗೌರವ ಸಲ್ಲಿಕೆ ಮಾಡಿದೆ.

ಬೆಂಗಳೂರು ಮೂಲದ ಕಲಾವಿದ ಕಾಶ್ಮೀರಾ ಸಾರೋಡೆ ಅವರ ಬಿಡಿಸಿದ ಜೋಷಿ ಅವರ ಚಿತ್ರವನ್ನು ಗೂಗಲ್‌ ಡೂಡಲ್‌ನಲ್ಲಿ ಹಾಕಿಕೊಂಡಿದೆ. 1886ರಲ್ಲಿ ಅಮೆರಿಕಾದಿಂದ ಬಂದ ಇವರು ತದನಂತರ ಕೋಲ್ಹಾಪುರದ ಆಲ್ಬರ್ಟ್‌ ಎಡ್ವರ್ಡ್‌ ಆಸ್ಪತ್ರೆಯ ಉಸ್ತುವಾರಿ ವಹಿಸಿದ್ದರು. ಆ ವೇಳೆ ಇವರಿಗೆ ಕೇವಲ 19 ವರ್ಷ.

1865ರ ಮಾರ್ಚ್‌ 31ರಂದು ಇವರು ಜನಸಿದ್ದು, 9 ವರ್ಷದಲ್ಲಿದ್ದಾಗಲೇ ಮದುವೆಯಾಗಿದ್ದರು. ಇವರ ಪತಿ ಇವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಪರಿಣಾಮ ಜೋಶಿ ಪೆನ್ಸಿಲೆನ್ವಿಯಾ ವಿವಿಯಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಪದವಿ ಪಡೆದರು. ಆದರೆ ದುರಾದೃಷ್ಟ ಎಂದರೆ ಇವರು ತಮ್ಮ 22ನೇ ವಯಸ್ಸಿನಲ್ಲಿ ಕ್ಷಯರೋಗದಿಂದಾಗಿ ಮೃತಪಟ್ಟರು.

About the author

Pradeep Kumar T R

Leave a Comment