ಅ೦ತರಾಷ್ಟ್ರೀಯ

ಭಾರತದ ಯುದ್ಧ ಬೆದರಿಕೆಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ: ಪಾಕ್‌ ಸೇನೆ

ಇಸ್ಲಾಮಾಬಾದ್‌: ಪುಲ್ವಾಮಾ ಉಗ್ರ ದಾಳಿಯ ನಂತರ ಭಾರತ – ಪಾಕಿಸ್ತಾನ ನಡುವೆ ತೀವ್ರ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ದಾಳಿಗೂ ತಕ್ಕ ಪ್ರತ್ಯುತ್ತರ ನೀಡುಲು ನಾವು ಸಮರ್ಥರಾಗಿದ್ದೇವೆ ಎಂದು ಪಾಕ್ ಸೇನೆ ಹೇಳಿದೆ.
ನಾವು ಯುದ್ಧ ಮಾಡಲು ಬಯಸುತ್ತಿಲ್ಲ. ಆದರೆ ಭಾರತದ ಯುದ್ಧ ಬೆದರಿಕೆಗಳಿಗೆ ಪ್ರತಿಕ್ರಿಯಿಸುವ ಹಕ್ಕನ್ನು ಪಾಕಿಸ್ತಾನ ಹೊಂದಿದೆ ಎಂದು ಪಾಕ್ ಸೇನಾ ಡಿಜಿ ಮೇಜರ್‌ ಜನರಲ್‌ ಆಸಿಫ್ ಗಫ‌ೂರ್‌ ಅವರು ಹೇಳಿದ್ದಾರೆ. ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗಫೂರ್ ಅವರು, ಭಾರತ ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಯಾವುದೇ ತನಿಖೆ ಇಲ್ಲದೆ ಪಾಕಿಸ್ತಾನದ ವಿರುದ್ಧ ಆರೋಪ ಮಾಡುತ್ತಿದೆ ಎಂದರು.
‘ನಾವು  ಯಾವುದೇ ಬೆದರಿಕೆಗೂ ಸಂಪೂರ್ಣ ಬಲದಿಂದ ಪ್ರತಿಕ್ರಿಯೆ ನೀಡುತ್ತೇವೆ. ಇದು ನಿಮಗೆ ಅಚ್ಚರಿ ನೀಡಲಿದೆ. ಪಾಕ್‌ನೊಂದಿಗೆ ಗೊಂದಲ ಬೇಡ’ ಎಂದಿರುವುದಾಗಿ ಪಿಟಿಐ ವರದಿ ಮಾಡಿದೆ. ಪಾಕಿಸ್ತಾನದ ಸೇನೆ ಸಾಕಷ್ಟು ಯುದ್ಧಗಳನ್ನು ಮಾಡಿದ ಅನುಭವ ಹೊಂದಿದೆ. ಯಾವುದೇ ದಾಳಿಗೂ ಪ್ರತ್ಯುತ್ತರ ಕೊಡಬಲ್ಲಷ್ಟು ಸಮರ್ಥವಾಗಿದೆ. ನಮ್ಮ ದೇಶದ ಸಾರ್ವಭೌಮತೆಗೆ ಧಕ್ಕೆ ಬರುವಂಥ ಸ್ಥಿತಿ ಇದ್ದರೆ ಅದಕ್ಕೆ ಹೋರಾಡಲು ಸೇನೆ ಸಿದ್ಧವಿದೆ ಎಂದು ಪಾಕ್ ಸೇನಾಧಿಕಾರಿ ಹೇಳಿದರು. ಆದರೆ, ಪಾಕಿಸ್ತಾನ ಮೊದಲು ಯುದ್ಧ ಆರಂಭಿವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment