ಕ್ರೀಡೆ

ಭಾರತದ ವಿಜಯೋತ್ಸವದಲ್ಲಿ ಶ್ರೀಲಂಕಾ ಧ್ವಜ

ಕೊಲಂಬೊ: ಬಾಂಗ್ಲಾದೇಶ ವಿರುದ್ಧದ ಫೈನಲ್‌ ಪಂದ್ಯವನ್ನು ರೋಚಕವಾಗಿ ಗೆದ್ದು ತ್ರಿಕೋನ ಟಿ20 ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟಕ್ಕೇರಿದ ಭಾರತ ತಂಡದ ವಿಜಯೋತ್ಸವದ ಸಂದರ್ಭದಲ್ಲಿ ಶ್ರೀಲಂಕಾ ಧ್ವಜ ರಾರಾಜಿಸಿದ್ದು ವಿಶೇಷ.

ಶುಕ್ರವಾರ ನಡೆದ ಅಂತಿಮ ಲೀಗ್‌ ಪಂದ್ಯದಲ್ಲಿ ಶ್ರೀಲಂಕಾ ಆಟಗಾರರೊಂದಿಗೆ ಬಾಂಗ್ಲಾದೇಶದ ಆಟಗಾರರು ದುರ್ವರ್ತನೆ ತೋರಿ ಅಶಿಸ್ತು ಪ್ರದರ್ಶಿಸಿದ್ದರು. ಸಾಕಷ್ಟು ವಿವಾದಗಳಿಗೆ ಸಾಕ್ಷಿಯಾಗಿದ್ದ ಆ ಪಂದ್ಯದಲ್ಲಿ ಬಾಂಗ್ಲಾದೇಶ ಗೆದ್ದು ಫೈನಲ್‌ ಪ್ರವೇಶಿಸಿತ್ತು. ತಮ್ಮ ರಾಷ್ಟ್ರದ ಆಟಗಾರರೊಂದಿಗೆ ಅನುಚಿತವಾಗಿ ವರ್ತಿಸಿದ್ದ ಬಾಂಗ್ಲಾ ಆಟಗಾರರ ವಿರುದ್ಧ ಶ್ರೀಲಂಕಾದ ಕ್ರಿಕೆಟ್‌ ಪ್ರಿಯರು ಆಕ್ರೋಶಗೊಂಡಿದ್ದರು. ಫೈನಲ್‌ ಪಂದ್ಯದಲ್ಲಿ ಎಲ್ಲರೂ ಭಾರತವನ್ನು ಬೆಂಬಲಿಸಿದರು.

ಪಂದ್ಯ ಗೆದ್ದು ಸಂಭ್ರಮಿಸುತ್ತಿದ್ದ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಅವರ ಕೈಗೆ ಶ್ರೀಲಂಕಾ ಅಭಿಮಾನಿಯೊಬ್ಬರು ಅವರ ರಾಷ್ಟ್ರದ ಧ್ವಜವನ್ನು ನೀಡಿದರು. ಅದನ್ನು ಹಿಡಿದುಕೊಂಡ ರೋಹಿತ್‌ ತಂಡದೊಂದಿಗೆ ಮೈದಾನಕ್ಕೆ ಒಂದು ಸುತ್ತು ಹಾಕಿ ಟೀಮ್‌ ಇಂಡಿಯಾವನ್ನು ಬೆಂಬಲಿಸಿದ ಶ್ರೀಲಂಕಾ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ಅರ್ಪಿಸಿದರು.

About the author

ಕನ್ನಡ ಟುಡೆ

Leave a Comment