ರಾಷ್ಟ್ರ ಸುದ್ದಿ

ಭಾರತದ ವಿಮಾನ ಹೊಡೆದುರುಳಿಸಲು ಎಫ್‌-16 ಅಲ್ಲ, ಜೆಎಫ್‌ 17 ಬಳಸಿದ್ದು: ಉಲ್ಟಾ ಹೊಡೆದ ಪಾಕಿಸ್ತಾನ

ಇಸ್ಲಾಮಾಬಾದ್‌: ಭಾರತದ ವಿರುದ್ಧ ಎಫ್‌-16 ಯುದ್ಧ ವಿಮಾನವನ್ನು ಬಳಸೇ ಇಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಭಾರತದ ವಿರುದ್ಧ ಎಫ್‌-16 ಯುದ್ಧ ವಿಮಾನ ಬಳಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಎಚ್ಚರಿಕೆ ನೀಡಿದ ನಂತರ ಪಾಕಿಸ್ತಾನ ಈ ಹೇಳಿಕೆ ನೀಡಿದೆ. ಆದರೆ ಪಾಕಿಸ್ತಾನಕ್ಕೆ ನುಗ್ಗಿ ಬಾಲಕೋಟ್‌ನಲ್ಲಿದ್ದ ಜೈಷೆ ಉಗ್ರರ ನೆಲೆಗಳನ್ನು ಭಾರತೀಯ ವಾಯುಪಡೆ ವಿಮಾನಗಳು ನಾಶ ಮಾಡಿದ್ದವು.

ಭಾರತದ ವಿಮಾನವನ್ನು ಎಫ್‌-16 ವಿಮಾನದಿಂದ ಹೊಡೆದುರುಳಿಸಿದ್ದೆವು ಎಂದು ಪಾಕಿಸ್ತಾನದ ಸೇನಾ ವಕ್ತಾರರೇ ಹೇಳಿಕೊಂಡಿದ್ದರು. ಆದರೆ ವಿಂಗ್‌ ಕಮಾಂಡರ್‌ ಅಭಿನಂದನ್‌ ಭಾರತದ ಎಫ್‌-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದರು. ಆದರೆ ಈಗ ಪಾಪಿಸ್ತಾನ ಉಲ್ಟಾ ಹೊಡೆದಿದೆ. ನಾವು ಎಫ್‌-16 ಯುದ್ಧ ವಿಮಾನವನ್ನು ಬಳಸಯೇ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಆದರೆ ಭಾರತ ಎಫ್‌-16 ಯುದ್ಧ ವಿಮಾನದ ಅವಶೇಷಗಳನ್ನು ಇಡೀ ಜಗತ್ತಿಗೆ ಸಾಕ್ಷಿಯಾಗಿ ನೀಡಿತ್ತು. ಇದನ್ನು ಕಂಡೇ ಪಾಕಿಸ್ತಾನಕ್ಕೆ ಅಮೆರಿಕ ಖಡಕ್‌ ಎಚ್ಚರಿಕೆ ನೀಡಿತ್ತು. ವಿದೇಶಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸೇನಾ ವಕ್ತಾರ ಆಸೀಫ್‌ ಗಫೂರ್, ಭಾರತದ ಯುದ್ಧ ವಿಮಾನ ಹೊಡೆದುರುಳಿಸಲು ಜೆಎಫ್‌ 17 ಎಂಬ ಬೇರೊಂದು ವಿಮಾನ ಬಳಸಲಾಗಿತ್ತು ಎಂದು ತೇಪೆ ಹಚ್ಚಿದ್ದಾರೆ. ಪಾಕಿಸ್ತಾನದ ಮುಖವಾಡ ಕಳಚಿಸಿದ್ದು, ಜಾಗತಿಕಮಟ್ಟದಲ್ಲಿ ಜಗಜ್ಜಾಹೀರಾಗಿದೆ.

About the author

ಕನ್ನಡ ಟುಡೆ

Leave a Comment