ಕ್ರೀಡೆ

“ಭಾರತದ ಸಿಡಿಲಮರಿ ಸಚಿನ್ ಬ್ಯಾಟ್ ನಿಂದ ಸಿಡಿದಿತ್ತು ವಿಶ್ವದ ಮೊಟ್ಟ ಮೊದಲ ದ್ವಿಶತಕ”

 ನವದೆಹಲಿ: ಟೆಸ್ಟ್ ಮಾತ್ರವಲ್ಲ ಏಕದಿನ ಕ್ರಿಕೆಟ್ ನಲ್ಲೂ ದ್ವಿಶತಕ ಸಿಡಸಬಹುದು ಎಂದು ತೋರಿಸಿಕೊಟ್ಟ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಕ್ಲಾಸ್ ಇನ್ನಿಂಗ್ಸ್ ಗೆ ಇಂದಿಗೆ 8 ವರ್ಷ..
  ಹೌದು…8 ವರ್ಷಗಳ ಹಿಂದೆ ಇದೇ ದಿನ ಸಚಿನ್ ತೆಂಡೂಲ್ಕರ್ ವಿಶ್ವದ ಮೊಟ್ಟ ಮೊದಲ ಏಕದಿನ ದ್ವಿಶತಕ ಸಿಡಿಸಿದ್ದರು. 2010 ಮಾರ್ಚ್ 24ರಂದು ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಸಚಿನ್ ಐತಿಹಾಸಿಕ ದ್ವಿಶತಕವನ್ನು ಬಾರಿಸಿದ್ದರು. ಈ ಮೂಲಕ ವಿಶ್ವ ಕ್ರಿಕೆಟ್‌ಗೆ ಏಕದಿನದಲ್ಲೂ ದ್ವಿಶತಕವನ್ನು ಸಿಡಿಸಬಹುದೆಂಬ ಪಾಠವನ್ನು ಸಚಿನ್ ಕಲಿಸಿಕೊಟ್ಟಿದ್ದರು.
            ತಾವು ಎದುರಿಸಿದ ಮೊದಲ 37 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ದ ಸಚಿನ್ 90 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದ್ದರು. ಬಳಿಕ ಕೇವಲ 118 ಎಸೆತಗಳಲ್ಲಿ 150ರನ್ ಸಿಡಿಸಿದ ಸಿಚಿನ್ 147 ಎಸೆತಗಲ್ಲೇ ದ್ವಿಶತಕ ಸಿಡಿಸಿದರು. ಇನ್ನಿಂಗ್ಸ್ ನ ಅಂತಿಮ ಓವರ್ ನಲ್ಲಿ ಸಚಿನ್ ದ್ವಿಶತಕ ಸಿಡಿಸಿದ್ದ ರೋಚಕವಾಗಿತ್ತು. ಆ ಮೂಲಕ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ವಿಶ್ವದ ಮೊಟ್ಟ ಮೊದಲ ದ್ವಿಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.
          ಇನ್ನು ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 401 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಕೇವಲ 147 ಎಸೆತಗಳನ್ನು ಎದುರಿಸಿದ್ದ ಸಚಿನ್ 25 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳಿಂದ 200 ರನ್ ಗಳಿಸಿ ವಿಜಯಸಾಧಿಸಿದ್ದರು. ಇನ್ನೊಂದೆಡೆ ಬಿರುಸಿನ ಬ್ಯಾಟಿಂಗ್ ಕಟ್ಟಿದ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಕೇವಲ 35 ಎಸೆತಗಳಲ್ಲಿ ಏಳು ಬೌಂಡರಿ ಹಾಗೂ ನಾಲ್ಕು ಸಿಕ್ಸರ್‌ಗಳಿಂದ 68 ರನ್ ಗಳಿಸಿ ಅಜೇಯರಾಗುಳಿದಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸಹ 79 ರನ್‌ಗಳ ಉಪಯುಕ್ತ ನೆರವನ್ನು ನೀಡಿದ್ದರು. 
ಬಳಿಕ ಉತ್ತರ ನೀಡಿದ ದಕ್ಷಿಣ ಆಫ್ರಿಕಾ ಎಬಿಡಿ ವಿಲಿಯರ್ಸ್ ಅಜೇಯ ಶತಕದ (114) ಹೊರತಾಗಿಯೂ 42.5 ಓವರ್‌ಗಳಲ್ಲಿ 248 ರನ್‌ಗಳಿಗೆ ಸರ್ವಪತನವನ್ನು ಕಂಡಿತ್ತು. ಭಾರತದ ಪರ ಶ್ರೀಶಾಂತ್ ಮೂರು ಹಾಗೂ ಆಶಿಶ್ ನೆಹ್ರಾ, ರವೀಂದ್ರ ಜಡೇಜಾ ಹಾಗೂ ಯೂಸುಫ್ ಪಠಾಣ್ ತಲಾ ಎರಡು ವಿಕೆಟುಗಳನ್ನು ಸಿಡಿಸಿದ್ದರು ಇನ್ನು ಸಚಿನ್ ಬಳಿಕ ಭಾರತದ ಇಬ್ಬರು ಸೇರಿದಂತೆ ಒಟ್ಟು ನಾಲ್ಕು ಮಂದಿ ಬ್ಯಾಟ್ಸ್‌ಮನ್‌ಗಳು ಏಕದಿನದಲ್ಲಿ ದ್ವಿಶತಕದ ಸಾಧನೆ ಮಾಡಿದ್ದು, ಈ ಪೈಕಿ ರೋಹಿತ್ ಶರ್ಮಾ ಮೂರು ಬಾರಿ 200ರ ಮೈಲಗಲ್ಲು ದಾಟಿರುವುದು ಗಮನಾರ್ಹವಾಗಿದೆ. ಉಳಿದಂತೆ ಮಾರ್ಟಿನ್ ಗಪ್ಟಿಲ್, ವಿರೇಂದ್ರ ಸೆಹ್ವಾಗ್, ಕ್ರಿಸ್ ಗೇಯ್ಲ್ ದ್ವಿಶತಕದ ಸಾಧನೆ ಮಾಡಿದ್ದಾರೆ.

 

 

 

About the author

ಕನ್ನಡ ಟುಡೆ

Leave a Comment