ರಾಷ್ಟ್ರ ಸುದ್ದಿ

21 ನಿಮಿಷಗಳಲ್ಲಿ ಭಾರತದ 3ನೇ ಬಲಿಷ್ಠ ಯುದ್ಧ ವಿಮಾನ ಮಿರಾಜ್-2000 ಕಾರ್ಯಾಚರಣೆ ಹೇಗಿತ್ತು

ನವದೆಹಲಿ: ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ದಾಳಿ ನಡೆಸುತ್ತದೆ ಎಂಬ ಹೆದರಿಕೆಯಲ್ಲಿದ್ದ ಪಾಕಿಸ್ತಾನ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದರು ಅಂತಾರಾಷ್ಟ್ರೀಯ ಗಡಿಯನ್ನೇ ದಾಟಿದ ಭಾರತದ ಬಲಿಷ್ಠ ಯುದ್ಧ ವಿಮಾನ ಮಿರಾಜ್-2000 ದೊಡ್ಡ ಪ್ರಮಾಣದಲ್ಲಿ ವಿಧ್ವಂಸಕವನ್ನೇ ಸೃಷ್ಠಿಸಿ ಯಶಸ್ವಿಯಾಗಿ ಸ್ವದೇಶಕ್ಕೆ ಮರಳಿದೆ.
 
ಹೌದು. ಮಿರಾಜ್ 2000 ಯುದ್ಧ ವಿಮಾನ ಲೇಸರ್ ನಿಯಂತ್ರಿತ ಬಾಂಬ್ ಬಳಸಿ ದಾಳಿ ನಡೆಸಿದೆ. ಪಾಕಿಸ್ತಾನದ ರೇಡಾರ್ ಅನ್ನೇ ಕಣ್ತಪ್ಪಿಸಿ ಭಾರತೀಯ ವಾಯುಪಡೆ ಪಾಕಿಸ್ತಾನದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಿದೆ. ಪಂಜಾಬ್ ನ ಆದಂಪುರ್ ವಾಯುನೆಲೆಯಿಂದ ರ್ಯಾಪಿಡ್ ಸೀಕ್ ಮತ್ತು ಡೆಸ್ಟ್ರಾಯ್ ಮಿಷನ್ ಶುರು ಮಾಡಲಾಗಿತ್ತು. ಈ ಕಾರ್ಯಾಚರಣೆ ಯಶಸ್ವಿಯಾಗಿ ನೆರವೇರಿದೆ. ಗಡಿ ನಿಯಂತ್ರಣ ರೇಖೆಯೊಳಗೆ ನುಗ್ಗಿದ 21 ನಿಮಿಷಗಳಲ್ಲಿ ಮಿರಾಜ್-2000 ಮಿಂಚಿನ ವೇಗದಲ್ಲಿ ದಾಳಿಯನ್ನು ನಡೆಸಲಾಗಿದೆ. ಬಾಲಾಕೋಟ್ ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಮುಂಜಾನೆ 3.45ಕ್ಕೆ ಮುಜಫ್ಫರಾಬಾದ್ ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಮುಂಜಾನೆ 3.48ಕ್ಕೆ ಚಾಕೋಟಿ ನಲ್ಲಿನ ಉಗ್ರರ ಕ್ಯಾಂಪ್ ಮೇಲೆ ಮುಂಜಾನೆ 3.58ಕ್ಕೆ ದಾಳಿ ನಡೆಸಿದೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಭಾರತೀಯ ವಾಯುಪಡೆಯ ಯುದ್ಧ ವಿಮಾನ ಮಿರಾಜ್ ಬಾಂಬ್ ದಾಳಿ ನಡೆಸಿದಾಗ ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಸೇನೆ ತಾವು ಪ್ರತಿದಾಳಿ ನಡೆಸಿರುವುದಾಗಿ ಹೇಳಿದೆ. ಆದರೆ ಪಾಕ್ ಪ್ರತಿದಾಳಿಗೂ ಮುನ್ನ ಮಿರಾಜ್ ಸ್ವದೇಶಕ್ಕೆ ಮರಳಿತ್ತು.

About the author

ಕನ್ನಡ ಟುಡೆ

Leave a Comment