ರಾಷ್ಟ್ರ ಸುದ್ದಿ

ಭಾರತವನ್ನು ನಾಶ ಮಾಡಲು ಜೋಕರ್ಸ್ ಮತ್ತು ಸುಳ್ಳುಗಾರರು ಒಂದಾಗಿದ್ದಾರೆ: ಮೆಗಾ ರ್ಯಾಲಿಗೆ ಬಿಜೆಪಿ ಟಾಂಗ್

ನವದೆಹಲಿ: ಭಾರತ ದೇಶವನ್ನು ಮತ್ತೆ ನಾಶ ಮಾಡಲು ಹಾಸ್ಯಗಾರರು ಮತ್ತು  ಸುಳ್ಳು ಕಲಾವಿದರು ಒಂದಾಗಿದ್ದಾರೆ ಎಂದು ಬಿಜೆಪಿ ಮುಖಂಡ ಮುಕುಲ್ ರಾಯ್ ಟೀಕಿಸಿದ್ದಾರೆ.
ಕೊಲ್ಕೊತ್ತಾದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಯೋಜಿಸಿರುವ ಮೆಗಾ ರ್ಯಾಲಿ ಸಂಬಂಧ ಪ್ರತಿಕ್ರಿಯಿಸಿರುವ ಮುಕುಲ್ ರಾಯ್, ಪಶ್ಚಿಮ ಬಂಗಾಳ ಮಮತಾ ಅಧಿಕಾರದಲ್ಲಿ ಮತ್ತೊಂದು ಸರ್ಕಸ್ ಗೆ ಸಾಕ್ಷಿಯಾಗಿದೆ ಎಂದು ಲೇವಡಿ ಮಾಡಿದ್ದಾರೆ.
ಮಮತಾ ಮೆಗಾ ರ್ಯಾಲಿ ಬಗ್ಗೆ ಟ್ವೀಟ್ ಮಾಡಿರುವ ಮುಕುಲ್ ರಾಯ್ ಬ್ರಿಗೇಡ್ ನಲ್ಲಿ ಡಿಎಂಕೆ ಮುಖಂಡ ಎಂ.ಕೆ ಸ್ಟಾಲಿನ್ ನೈಜ ರಾಜಕಾರಣಿಯಂತೆ ಸುಳ್ಳು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

About the author

ಕನ್ನಡ ಟುಡೆ

Leave a Comment