ರಾಷ್ಟ್ರ

ಭಾರತೀಯರು ರೋಗನಿರೋಧಕ ಔಷಧವನ್ನು ಬಳಸುವ ಪ್ರಮಾಣ 15 ವರ್ಷದಲ್ಲಿ ದ್ವಿಗುಣ

ನವದೆಹಲಿ :  2000 ಮತ್ತು 2015 ನಡುವಿನ ವರ್ಷದಲ್ಲಿ ಭಾರತೀಯರು ರೋಗನಿರೋಧಕ ಔಷಧವನ್ನು ಬಳಸುವ ಪ್ರಮಾಣ ಎರಡು ಪಟ್ಟು ಹೆಚ್ಚಾಗಿದೆ. ಇದರ ಬಳಕೆಯಿಂದ ಇ ಕೊಲಿ, ಗಂಟಲು ಸೊಂಕು, ನ್ಯುಮೋನಿಯಾ ಹಾಗೂ ಕ್ಷಯರೋಗಗಳಂತಹ ಸೋಂಕುಗಳಿಗೆ ಚಿಕಿತ್ಸೆ ನೀಡುವುದಕ್ಕೆ ಸಮಸ್ಯೆಯಾಗಿದೆ ಎಂದು ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್​ ಪ್ರೊಸೀಡಿಂಗ್ಸ್ ಅಧ್ಯಯನ (PNAS) ತಿಳಿಸಿದೆ.

3.2 ಬಿಲಿಯನ್​ ಇದ್ದ ರೋಗ ನಿರೋಧಕ ಔಷಧ ಬಳಸುವ ಪ್ರಮಾಣ ಇದೀಗ 6.5 ಬಿಲಿಯನ್​ಗಳಷ್ಟಾಗಿದೆ. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ರೋಗ ನಿರೋಧಕ ಹೆಚ್ಚಾಗಿ ಬಳಕೆಯಾಗುತ್ತಿರುವುದು ಆರ್ಥಿಕ ಬೆಳವಣಿಗೆ ಹೆಚ್ಚಾಗುತ್ತಿರುವುದನ್ನು ಪ್ರತಿಬಿಂಬಿಸುತ್ತಿದೆ.2015ರಲ್ಲಿ ಜಾಗತಿಕ ಮಟ್ಟದಲ್ಲಿ ರೋಗ ನಿರೋಧಕವನ್ನು 35 ಬಿಲಿಯನ್​ ಜನರು ಬಳಸುತ್ತಿದ್ದು, 2000 ಇಸವಿಯಿಂದಿಚೆಗೆ ಶೇ. 65 ರಷ್ಟು ಹೆಚ್ಚಾಗಿದ್ದು, ಸುಮಾರು 76 ದೇಶಗಳಲ್ಲಿ ರೋಗ ನಿರೋಧಕ ಔಷಧಗಳನ್ನು ಬಳಸಲಾಗುತ್ತಿದೆ.ರೋಗ ನಿರೋಧಕಗಳ ದುರ್ಬಳಕೆ ಹಾಗೂ ಅತಿಯಾದ ಬಳಕೆಯಿಂದ ಬ್ಯಾಕ್ಟಿರಿಯಲ್​ ಸೊಂಕು ನಿವಾರಣೆ ಅಸಾಧ್ಯವಾಗಿದ್ದು, ಅದು ಶೀಘ್ರವೇ ಔಷಧಿಯನ್ನು ಸ್ವೀಕರಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂದು ಅಧ್ಯಯನ ತಿಳಿಸಿದೆ.

About the author

ಕನ್ನಡ ಟುಡೆ

Leave a Comment